Thursday, July 7, 2022
Home ಸಮಾಚಾರ ಜಿಲ್ಲಾ ಸುದ್ದಿ ಮಲ್ಪೆ ಫ್ಲವರ್ಸ್ ಆಫ್ ಪ್ಯಾರಡೈಸ್ ಮಕ್ಕಳಿಂದ ಗಣರಾಜ್ಯೋತ್ಸವ ಪೆರೇಡ್

ಮಲ್ಪೆ ಫ್ಲವರ್ಸ್ ಆಫ್ ಪ್ಯಾರಡೈಸ್ ಮಕ್ಕಳಿಂದ ಗಣರಾಜ್ಯೋತ್ಸವ ಪೆರೇಡ್

ಉಡುಪಿ: ಗಣರಾಜ್ಯೋತ್ಸವದ ಪ್ರಯುಕ್ತ ಮಲ್ಪೆ ಫ್ಲವರ್ಸ್ ಆಫ್ ಪ್ಯಾರಡೈಸ್ ಪಬ್ಲಿಕ್ ಶಾಲೆಯಲ್ಲಿ ಗಣರಾಜ್ಯೋತ್ಸವ ಪೆರೇಡ್ ವಿಜ್ರಂಭಣೆಯಿಂದ ನಡೆಯಿತು.

ಬ್ಯಾಂಡು, ಘೋಷಣೆಗಳು, ದೇಶದ ಸಂವಿಧಾನದ ಪೀಠಿಕೆ ಹೊತ್ತ ಟ್ಯಾಬ್ಲೊ ವಾಹನ, ಸಂವಿಧಾನದ ಪೀಠಿಕೆಯ ನಿರಂತರ ವಾಚನ, ರಾಷ್ಟ್ರೀಯ ಲಾಂಛನಗಳು, ರಾಷ್ಟ್ರೀಯ ಸಂಕೇತಗಳು, ವಿವಿಧತೆಯಲ್ಲಿ ಏಕತೆ ಸಾರುವ ವಿವಿಧ ರಾಜ್ಯಗಳ ಉಡುಪಿನಲ್ಲಿ ಕಂಗೊಳಿಸುತ್ತಿದ್ದ ವಿದ್ಯಾರ್ಥಿಗಳು, ದೇಶಪ್ರೇಮ ಸಾರುವ ಹಾಡುಗಳು, ಕೊರೊನಾ ಮತ್ತು ಶೈಕ್ಷಣಿಕ ಜಾಗೃತಿ ಕುರಿತ ಟ್ಯಾಬ್ಲೊ ಮತ್ತು ಘೋಷಣೆಗಳು, ಶಾಲೆಯ ವಿಶೇಷತೆ ಮತ್ತು ಚಟುವಟಿಕೆಗಳ ಕುರಿತ ಫಲಕಗಳು ಇತ್ಯಾದಿಗಳೊಂದಿಗೆ ಮೆರವಣಿಗೆ ಸಾಗಿತು.

ವಿದ್ಯಾರ್ಥಿಗಳು ಶುಭ್ರ ಬಿಳಿ ಬಣ್ಣದ ಸಮವಸ್ತ್ರ ಧರಿಸಿದ್ದರು. ಶಾಲೆಯಿಂದ ಹೊರಟ ಪೆರೇಡ್ ಮಲ್ಪೆ ಪೇಟೆ, ಬಸ್ ನಿಲ್ದಾಣ ಸರ್ಕಲ್, ಕೊಳ, ಬೀಚ್, ವಡಭಾಂಡೇಶ್ವರ ಮಾರ್ಗವಾಗಿ ಸಾಗಿ ಶಾಲೆಗೆ ಬಂದು ತಲುಪಿತು.

ಉಡುಪಿ ಜಿಲ್ಲಾ ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಎನ್. ಎಚ್. ನಾಗೂರ್ ಮೆರವಣಿಗೆ ಸಮಾಪನಗೊಳಿಸಿ ಸಮಾರೋಪ ಭಾಷಣ ಮಾಡಿದರು.

ಮಲ್ಪೆ ಎಜುಕೇಶನ್ ಟ್ರಸ್ಟ್ ಅಧ್ಯಕ್ಷ ಎಫ್. ಎಂ. ಅಬ್ದುರ್ರಝಾಕ್ ಧ್ವಜಾರೋಹಣ ನೆರವೇರಿಸಿ, ಪೆರೇಡ್ ಗೆ ಚಾಲನೆ ನೀಡಿದರು. ಪ್ರೌಢಶಾಲಾ ಮುಖ್ಯ ಶಿಕ್ಷಕಿ ಶ್ವೇತಾ ಪ್ರಶಾಂತ ಶೆಟ್ಟಿ ಸ್ವಾಗತಿಸಿ, ಪ್ರಾಥಮಿಕ ಶಾಲಾ ಮುಖ್ಯ ಶಿಕ್ಷಕಿ ಸಹನಾ ಅನಿಲ್ ವಂದಿಸಿದರು.

ಶಾಲಾ ಶೈಕ್ಷಣಿಕ ನಿರ್ದೇಶಕ ಯಾಸೀನ್ ಮಲ್ಪೆ, ಟ್ರಸ್ಟ್ ನ ಪ್ರಧಾನ ಕಾರ್ಯದರ್ಶಿ ಖತೀಬ್ ಅಲ್ತಾಫ್, ಕೋಶಾಧಿಕಾರಿ ಅಬ್ದುಲ್ ಸತ್ತಾರ್, ಟ್ರಸ್ಟ್ ಸದಸ್ಯರಾದ ಆಸಿಫ್, ಇಕ್ಬಾಲ್ ಹಾಗೂ ಸುಹೇಲ್ ಇದ್ದರು.

ನಿಮಗೆ ಈ ಸುದ್ದಿ ಇಷ್ಟವಾಯ್ತಾ?
ಹಾಗಾದರೆ ಇತರರಿಗೂ SHARE ಮಾಡಿ ಓದಿಸಿ...

ಕಾಮೆಂಟ್ ಮಾಡಿ

error: Content is protected !!