Saturday, July 2, 2022
Home ಸಮಾಚಾರ ಜಿಲ್ಲಾ ಸುದ್ದಿ ಮಣಿಪಾಲ, ಅತ್ತಾವರ ಆಸ್ಪತ್ರೆಗಳಲ್ಲಿ ಆಕ್ಸಿಜನ್ ಘಟಕ ಸ್ಥಾಪನೆ

ಮಣಿಪಾಲ, ಅತ್ತಾವರ ಆಸ್ಪತ್ರೆಗಳಲ್ಲಿ ಆಕ್ಸಿಜನ್ ಘಟಕ ಸ್ಥಾಪನೆ

ಉಡುಪಿ: ದ.ಕ. ಮತ್ತು ಉಡುಪಿ ಜಿಲ್ಲೆಗಳಲ್ಲಿ ಈಚಿನ ದಿನಗಳಲ್ಲಿ ಕೋವಿಡ್ ಸೋಂಕಿತರು ಹಾಗೂ ಆಮ್ಲಜನಕ ಅಪೇಕ್ಷಿತರ ಸಂಖ್ಯೆ ಹೆಚ್ಚುತ್ತಿರುವುದನ್ನು ಮನಗಂಡು ಮಣಿಪಾಲ ಕೆಎಂಸಿ ಮತ್ತು ಮಂಗಳೂರಿನ ಅತ್ತಾವರ ಕೆಎಂಸಿ ಆಸ್ಪತ್ರೆಗಳಲ್ಲಿ ತಲಾ 1,500 ಮತ್ತು 500 ಎಲ್.ಟಿ.ಎಂ ಸಾಮರ್ಥ್ಯದ ಆಮ್ಲಜನಕ ಘಟಕ ನಿರ್ಮಿಸುತ್ತಿರುವುದಾಗಿ ಮಣಿಪಾಲ ಕೆಎಂಸಿ ಆಸ್ಪತ್ರೆ ವೈದ್ಯಕೀಯ ಅಧೀಕ್ಷಕ ಡಾ. ಅವಿನಾಶ ಶೆಟ್ಟಿ ಹಾಗೂ ಅತ್ತಾವರ ಕೆಎಂಸಿ ಆಸ್ಪತ್ರೆ ವೈದ್ಯಕೀಯ ಅಧೀಕ್ಷಕ ಡಾ. ಜಾನ್ ಟಿ. ರಾಮಪುರೆ ಸಂಯುಕ್ತ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಮಣಿಪಾಲ ಕೆಎಂಸಿ ಆಸ್ಪತ್ರೆ 2,032 ಹಾಸಿಗೆಗಳ ಆಸ್ಪತ್ರೆಯಾಗಿದ್ದು, ಸಣ್ಣ ಶಸ್ತ್ರಚಿಕಿತ್ಸಾ ಕೊಠಡಿ ಸೇರಿದಂತೆ 26 ಶಸ್ತ್ರಚಿಕಿತ್ಸಾ ಕೊಠಡಿ, 250 ಐಸಿಯು ಹಾಸಿಗೆ, 900 ಇತರ ಹಾಸಿಗೆ ಮತ್ತು ಎರಡು ಅಂಗಸಂಸ್ಥೆಗಳಿಗೆ ವೈದ್ಯಕೀಯ ಆಮ್ಲಜನಕ ಪೂರೈಸುತ್ತಿದೆ. ಪ್ರಸ್ತುತ ಆಮ್ಲಜನಕದ ದೈನಂದಿನ ಬಳಕೆ 2,200 ಲೀ.ಗೆ ಹೆಚ್ಚಳವಾಗಿದೆ. ಆಸ್ಪತ್ರೆ 20 ಸಾವಿರ ಲೀ.ನಷ್ಟು ವೈದ್ಯಕೀಯ ಆಮ್ಲಜನಕದ ಶೇಖರಣಾ ಟ್ಯಾಂಕ್ ಸಾಮರ್ಥ್ಯ ಹೊಂದಿದೆ. ಅದನ್ನು ವಾರಕ್ಕೆ ಎರಡು ಬಾರಿ ಬಳ್ಳಾರಿಯ ಕ್ರಯೋಜೆನಿಕ್ ಟ್ಯಾಂಕರ್ (ಸುಮಾರು 380 ಕಿ.ಮೀ.)ನಿಂದ ತರಿಸಲಾಗುತ್ತದೆ. ಎಲ್.ಎಂ.ಒ ಟ್ಯಾಂಕ್ ನ ಒತ್ತಡದ ಕುಸಿತದಿಂದಾಗಿ ಕೇವಲ 15,400 ಲೀ.ನಷ್ಟು ಮಾತ್ರ ಬಳಸಬಹುದಾಗಿದ್ದು, ಅದು 7 ದಿನಗಳ ಆವಶ್ಯಕತೆ ಪೂರೈಸುತ್ತದೆ. ಅಲ್ಲದೆ, ಹೆಚ್ಚುವರಿಯಾಗಿ 7 ಕ್ಯೂ. ಮೀ. ಸಾಮರ್ಥ್ಯದ 121 ಜಂಬೊ ಸಿಲಿಂಡರ್ ಇದೆ ಎಂದು ಆಸ್ಪತ್ರೆ ಎಂ.ಎಸ್. ಡಾ. ಅವಿನಾಶ ಶೆಟ್ಟಿ ತಿಳಿಸಿದ್ದಾರೆ.

ಮಂಗಳೂರಿನ ಅತ್ತಾವರ ಕೆಎಂಸಿ ಆಸ್ಪತ್ರೆ 610 ಹಾಸಿಗೆಗಳ ಆಸ್ಪತ್ರೆಯಾಗಿದ್ದು, ಸಣ್ಣ ಶಸ್ತ್ರಚಿಕಿತ್ಸಾ ಕೊಠಡಿ ಸೇರಿದಂತೆ 10 ಶಸ್ತ್ರಚಿಕಿತ್ಸಾ ಕೊಠಡಿ, 44 ಐಸಿಯು ಹಾಸಿಗೆ, 113 ಇತರ ಹಾಸಿಗೆ ಮತ್ತು ಎರಡು ಅಂಗಸಂಸ್ಥೆಗಳಿಗೆ ವೈದ್ಯಕೀಯ ಆಮ್ಲಜನಕ ಪೂರೈಕೆಯಾಗುತ್ತಿದೆ. ಪ್ರಸ್ತುತ ದಿನನಿತ್ಯದ ಆಮ್ಲಜನಕದ ಬಳಕೆ 600 ಲೀ. ಅವಶ್ಯವಿದೆ. ಆಸ್ಪತ್ರೆ 6 ಸಾವಿರ ಲೀ. ಎಲ್ಎಂಒ ಶೇಖರಣಾ ಟ್ಯಾಂಕ್ ಸಾಮರ್ಥ್ಯ ಹೊಂದಿದೆ. ಅದನ್ನು ವಾರಕ್ಕೆ ಎರಡು ಬಾರಿ ಕ್ರಯೋಜೆನಿಕ್ ಟ್ಯಾಂಕರ್ ಮರುಪೂರಣಗೊಳಿಸುತ್ತಿವೆ. ಅಲ್ಲದೇ 42 ಜಂಬೋ ಸಿಲಿಂಡರ್ಗಳ ಹೆಚ್ಚುವರಿ ವ್ಯವಸ್ಥೆ ಇದೆ ಎಂದು ಆಸ್ಪತ್ರೆ ಎಂ.ಎಸ್. ಡಾ. ಜಾನ್ ಟಿ. ರಾಮ್ಪುರೆ ತಿಳಿಸಿದ್ದಾರೆ.

ಎರಡೂ ಘಟಕಗಳ ಒಟ್ಟು ವೆಚ್ಚ 1.10 ಕೋ. ರೂ. ಆಗಲಿದ್ದು, ಮುಂದಿನ 4- 5 ತಿಂಗಳಲ್ಲಿ ಸಿದ್ಧಗೊಳ್ಳಲಿದೆ

ನಿಮಗೆ ಈ ಸುದ್ದಿ ಇಷ್ಟವಾಯ್ತಾ?
ಹಾಗಾದರೆ ಇತರರಿಗೂ SHARE ಮಾಡಿ ಓದಿಸಿ...

ಕಾಮೆಂಟ್ ಮಾಡಿ

error: Content is protected !!