Monday, August 15, 2022
Home ಸಮಾಚಾರ ಜಿಲ್ಲಾ ಸುದ್ದಿ ಶತಾಯುಷಿ ಮಿಜಾರುಗುತ್ತು ಆನಂದ ಆಳ್ವರಿಗೆ ಗೌರವಾರ್ಪಣೆ

ಶತಾಯುಷಿ ಮಿಜಾರುಗುತ್ತು ಆನಂದ ಆಳ್ವರಿಗೆ ಗೌರವಾರ್ಪಣೆ

ಸುದ್ದಿಕಿರಣ ವರದಿ
ಶುಕ್ರವಾರ, ಜುಲೈ 29

ಶತಾಯುಷಿ ಮಿಜಾರುಗುತ್ತು ಆನಂದ ಆಳ್ವರಿಗೆ ಗೌರವಾರ್ಪಣೆ
ಉಡುಪಿ: ಕಳೆದ 32 ವರ್ಷದಿಂದ ಪ್ರತೀ ವರ್ಷ ಆಗಸ್ಟ್ 15ರಂದು ಸ್ವಾತಂತ್ರ್ಯೋತ್ಸವ ಸಂಭ್ರಮವನ್ನು ವಿಶಿಷ್ಟ ಕಲಾರಾಧನೆ ಮೂಲಕ ಆಚರಿಸುತ್ತಿರುವ ಕಲಾ ಸಂಘಟಕ ಉಡುಪಿ ಸುಧಾಕರ ಆಚಾರ್ಯ ಈ ಬಾರಿ ಸ್ವಾತಂತ್ರ್ಯ ಅಮೃತ ಮಹೋತ್ಸವನ್ನು ಅಗಸ್ಟ್ 15ರಂದು ಇಲ್ಲಿನ ಅಮ್ಮಣ್ಣಿ ರಾಮಣ್ಣ ಶೆಟ್ಟಿ ಸಭಾಂಗಣದಲ್ಲಿ ಬೆಳಿಗ್ಗೆ 8.30ರಿಂದ ರಾತ್ರಿ 10.30ರ ವರೆಗೆ ಯಕ್ಷಗಾನ ಅಮೃತ ರಸಧಾರೆ ಕಾರ್ಯಕ್ರಮ ಆಯೋಜಿಸಿದ್ದಾರೆ.

ಈ ಆಚರಣೆ ಅಂಗವಾಗಿ ಆಗಸ್ಟ್ 15ರಂದೇ ಜನಿಸಿದ ಶತಾಯುಷಿ ಮೂಡುಬಿದಿರೆ ಮಿಜಾರು ಗುತ್ತು ಆನಂದ ಆಳ್ವ ಅವರನ್ನು, ಸುಪುತ್ರ ಮೂಡುಬಿದಿರೆ ಶಿಕ್ಷಣ ಶಿಲ್ಪಿ ಡಾ. ಎಂ. ಮೋಹನ ಆಳ್ವ ಸ್ವಗೃಹದಲ್ಲಿ ಸನ್ಮಾನಿಸಲಾಯಿತು.

ವಿಶೇಷವಾಗಿ ಕಾಣಸಿಗುವ ಆನಂದ ಆಳ್ವರ ನಾಲ್ಕು ತಲೆಮಾರಿನವರಾದ ಡಾ. ಎಂ. ಮೋಹನ ಆಳ್ವ, ವಿವೇಕ ಆಳ್ವ, ವೇದ್ ಆಳ್ವ ಮತ್ತು ಸೊಸೆಯಂದಿರು ಹಾಗೂ ಕರ್ನಾಟಕ ಯಕ್ಷಗಾನ ಅಕಾಡೆಮಿ ಮಾಜಿ ಅಧ್ಯಕ್ಷ ಪ್ರೊ. ಎಂ. ಎಲ್. ಸಾಮಗ, ಕಲಾಪೋಷಕ ಭುವನ ಪ್ರಸಾದ್ ಹೆಗ್ಡೆ ಮಣಿಪಾಲ, ಉದ್ಯಮಿ ಶ್ರೀಪತಿ ಭಟ್ ಮೂಡುಬಿದಿರೆ, ರಾಮಚಂದ್ರ ಮಿಜಾರು, ಪಂಚ ಮೇಳಗಳ ಯಜಮಾನ ಪಳ್ಳಿ ಕಿಶನ್ ಹೆಗ್ಡೆ, ಮುಂಬೈ ಉದ್ಯಮಿ ಬಿ. ರಮಾನಂದ ರಾವ್, ಲಕ್ಷ್ಮೀ ಆರ್. ರಾವ್, ಸುಧಾಕರ ಆಚಾರ್ಯ, ಅಮಿತಾ ಸುಧಾಕರ ಆಚಾರ್ಯ ಉಪಸ್ಥಿತರಿದ್ದರು.

ಪ್ರೊ. ಎಂ. ಎಲ್. ಸಾಮಗ ಅವರು ಆನಂದ ಆಳ್ವರ ದೀರ್ಘ ಜೀವನದ ಮಹತ್ತರ ಸಾಧನೆಗಳನ್ನು ಪ್ರಶಂಸಾಪೂರ್ವಕ ಸ್ಮರಿಸಿ, ನಿರೂಪಿಸಿದರು.

ನಿಮಗೆ ಈ ಸುದ್ದಿ ಇಷ್ಟವಾಯ್ತಾ?
ಹಾಗಾದರೆ ಇತರರಿಗೂ SHARE ಮಾಡಿ ಓದಿಸಿ...

ಕಾಮೆಂಟ್ ಮಾಡಿ

error: Content is protected !!