Monday, August 15, 2022
Home ಸಮಾಚಾರ ಜಿಲ್ಲಾ ಸುದ್ದಿ ಸಚಿವ ಕೋಟ ಬೆಂಗಾವಲು ವಾಹನ ಪಲ್ಟಿ; ಎಸ್ಕಾರ್ಟ್ ಪೊಲೀಸ್ ಗೆ ಗಾಯ

ಸಚಿವ ಕೋಟ ಬೆಂಗಾವಲು ವಾಹನ ಪಲ್ಟಿ; ಎಸ್ಕಾರ್ಟ್ ಪೊಲೀಸ್ ಗೆ ಗಾಯ

ಸುದ್ದಿಕಿರಣ ವರದಿ
ಮಂಗಳವಾರ, ಜುಲೈ 12

ಸಚಿವ ಕೋಟ ಬೆಂಗಾವಲು ವಾಹನ ಪಲ್ಟಿ; ಎಸ್ಕಾರ್ಟ್ ಪೊಲೀಸ್ ಗೆ ಗಾಯ
ಉಡುಪಿ: ಮುಖ್ಯಮಂತ್ರಿ ಕಾರ್ಯಕ್ರಮಕ್ಕೆ ತೆರಳುತ್ತಿದ್ದ ಹಿಂದುಳಿದ ವರ್ಗ ಮತ್ತು ಸಮಾಜ ಕಲ್ಯಾಣ ಖಾತೆ ಸಚಿವ ಕೋಟ ಶ್ರೀನಿವಾಸ ಪೂಜಾರಿ ಬೆಂಗಾವಲು ವಾಹನ ರಾಷ್ಟ್ರೀಯ ಹೆದ್ದಾರಿ 66ರ ಸಂತೆಕಟ್ಟೆ ಕೆಜಿ ರೋಡ್ ಬಳಿ ಅಪಘಾತಕ್ಕಿಡಾದ ಘಟನೆ ಮಂಗಳವಾರ ನಡೆದಿದೆ.

ಸಚಿವ ಕೋಟ ಶ್ರೀನಿವಾಸ ಪೂಜಾರಿ ಮಂಗಳೂರಿನಲ್ಲಿ ಮುಖ್ಯಮಂತ್ರಿ ಕಾರ್ಯಕ್ರಮಕ್ಕೆ ತೆರಳುತ್ತಿದ್ದರು.

ಈ ವೇಳೆ ಬೆಂಗಾವಲು ವಾಹನದ ಮುಂದೆ ಚಲಿಸುತ್ತಿದ್ದ ಲಾರಿ ಸೂಚನೆ ನೀಡದೇ ಪಥ ಬದಲಿಸಿದ ಪರಿಣಾಮ ಎಸ್ಕಾರ್ಟ್ ವಾಹನ ರಸ್ತೆಯ ಡಿವೈಡರ್ ಗೆ ಢಿಕ್ಕಿ ಹೊಡೆದು ಪಲ್ಟಿಯಾಗಿದೆ.

ವಾಹನದಲ್ಲಿದ್ದ ಎಎಸೈ ಮತ್ತು ಎಸ್ಕಾರ್ಟ್ ಆಫೀಸರ್ ಗಣೇಶ್ ಆಳ್ವ ಅವರಿಗೆ ಚಿಕ್ಕಪುಟ್ಟ ತರಚಿದ ಗಾಯಗಳಾಗಿದ್ದು, ಪ್ರಾಣಾಮಾಯದಿಂದ ಪಾರಾಗಿದ್ದಾರೆ.

ಗಾಯಾಳು ಆಳ್ವ ಅವರನ್ನು ಸಚಿವ ಕೋಟ ತನ್ನ ವಾಹನದಲ್ಲಿ ಉಡುಪಿ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ.

ನಿಮಗೆ ಈ ಸುದ್ದಿ ಇಷ್ಟವಾಯ್ತಾ?
ಹಾಗಾದರೆ ಇತರರಿಗೂ SHARE ಮಾಡಿ ಓದಿಸಿ...

ಕಾಮೆಂಟ್ ಮಾಡಿ

error: Content is protected !!