Saturday, July 2, 2022
Home ಸಮಾಚಾರ ಜಿಲ್ಲಾ ಸುದ್ದಿ ವೃಕ್ಷಾರೋಪಣ ಅಭಿಯಾನದಲ್ಲಿ ಭಾಗಿ

ವೃಕ್ಷಾರೋಪಣ ಅಭಿಯಾನದಲ್ಲಿ ಭಾಗಿ

ಬ್ರಹ್ಮಾವರ: ಜನಸಂಘ ಸಂಸ್ಥಾಪಕ ಡಾ. ಶ್ಯಾಮ್ ಪ್ರಸಾದ್ ಮುಖರ್ಜಿ ಸಂಸ್ಮರಣೆ ಪ್ರಯುಕ್ತ ಜಿಲ್ಲೆಯಾದ್ಯಂತ ಎಲ್ಲ ಮಂಡಲ, ಮಹಾಶಕ್ತಿ ಕೇಂದ್ರ ಮತ್ತು ಬೂತ್ ಗಳಲ್ಲಿ ಕಳೆದ ಜೂ. 23ರಿಂದ ಆರಂಭವಾದ ವೃಕ್ಷಾರೋಪಣ ಅಭಿಯಾನ ಜು. 6ರ ವರೆಗೆ ನಡೆಯಲಿದ್ದು, ಭಾನುವಾರ ಸಣ್ಣ ನೀರಾವರಿ ಸಚಿವ ಜೆ. ಸಿ. ಮಾಧುಸ್ವಾಮಿ ಅಭಿಯಾನದಲ್ಲಿ ಭಾಗವಹಿಸಿದರು.

ಅವರು ಹಾರಾಡಿ ಭಾಗದಲ್ಲಿ ಸಸಿ ನೆಟ್ಟರು. ಶಾಸಕ ರಘುಪತಿ ಭಟ್ ಇದ್ದರು.

ಗ್ರಾಮಾಂತರ ಬಿಜೆಪಿ ಉಪಾಧ್ಯಕ್ಷ ರಘುರಾಮ್ ಶೆಟ್ಟಿ, ಬ್ರಹ್ಮಾವರ ತಾ. ಪಂ. ಮಾಜಿ ಸದಸ್ಯೆ ವಸಂತಿ ಬೈಕಾಡಿ, ಶಕ್ತಿ ಕೇಂದ್ರ ಸಂಚಾಲಕ ಮಹೇಶ್ ಸುವರ್ಣ, ಸಹ ಸಂಚಾಲಕ ನಾಗರಾಜ್ ಶೆಟ್ಟಿಗಾರ್, ಪಕ್ಷ ಪ್ರಮುಖರಾದ ಪ್ರದೀಪ್ ಕುಂದರ್, ಪ್ರಶಾಂತ್ ಕೋಟ್ಯಾನ್, ಅಶ್ವಿನ್ ಕುಂದರ್, ರಾಜೇಶ್ ತಿಂಗಳಾಯ, ಸೋಮನಾಥ ಸುವರ್ಣ, ರಾಜೇಶ್ ಸುವರ್ಣ ಮೊದಲಾದವರಿದ್ದರು

ನಿಮಗೆ ಈ ಸುದ್ದಿ ಇಷ್ಟವಾಯ್ತಾ?
ಹಾಗಾದರೆ ಇತರರಿಗೂ SHARE ಮಾಡಿ ಓದಿಸಿ...

ಕಾಮೆಂಟ್ ಮಾಡಿ

error: Content is protected !!