Saturday, July 2, 2022
Home ಸಮಾಚಾರ ಜಿಲ್ಲಾ ಸುದ್ದಿ ದಿವ್ಯಾಂಗರೊಂದಿಗೆ ಹುಟ್ಟುಹಬ್ಬ ಆಚರಿಸಿದ ಶಾಸಕ ಭಟ್

ದಿವ್ಯಾಂಗರೊಂದಿಗೆ ಹುಟ್ಟುಹಬ್ಬ ಆಚರಿಸಿದ ಶಾಸಕ ಭಟ್

ಉಡುಪಿ: ತನ್ನ 52ನೇ ಹುಟ್ಟುಹಬ್ಬವನ್ನು ಶಾಸಕ ರಘುಪತಿ ಭಟ್ ಬುಧವಾರ ಉಪ್ಪೂರು ಸ್ಪಂದನ ಬೌದ್ಧಿಕ ದಿವ್ಯಾಂಗರ ವಸತಿ ಶಾಲೆಯಲ್ಲಿ ಆಚರಿಸಿದರು.

ಉಪ್ಪೂರು ಸ್ಪಂದನ ಬೌದ್ಧಿಕ ದಿವ್ಯಾಂಗರ ವಸತಿ ಶಾಲೆಯಲ್ಲಿ ಇಂದು ದಿನಾಂಕ 24-02-2021 ರಂದು ಶಾಸಕ ಶ್ರೀ ಕೆ. ರಘುಪತಿ ಭಟ್ ಅವರು ತಮ್ಮ 52ನೇ ಜನ್ಮದಿನಾಚರಣೆ ಆಚರಿಸಿದರು.

ದಿವ್ಯಾಂಗರಿಗೆ ಉಡುಗೊರೆ ನೀಡುವ ಮೂಲಕ ಅವರಲ್ಲಿ ಆತ್ಮಸ್ಥೈರ್ಯ ತುಂಬಿದರು.

ಉಡುಪಿ ನಗರಾಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಕೆ. ರಾಘವೇಂದ್ರ ಕಿಣಿ, ಉಪ್ಪೂರು ಗ್ರಾಮ ಪಂಚಾಯತ್ ಅಧ್ಯಕ್ಷ ಕೃಷ್ಣರಾಜ್ ಕೋಟ್ಯಾನ್, ಉಪಾಧ್ಯಕ್ಷೆ ವಿದ್ಯಾ ಆಚಾರ್, ಕಲ್ಯಾಣಪುರ ಮಹಾಶಕ್ತಿ ಕೇಂದ್ರ ಅಧ್ಯಕ್ಷ ಪ್ರದೀಪ್ ಮಧ್ಯಸ್ಥ, ನಗರಾಭಿವೃದ್ಧಿ ಪ್ರಾಧಿಕಾರ ಸದಸ್ಯ ಪ್ರವೀಣ್ ಶೆಟ್ಟಿ ಕಪ್ಪೆಟ್ಟು, ಅಕ್ರಮ- ಸಕ್ರಮ ಸಮಿತಿ ಸದಸ್ಯ ರಾಜು ಪೂಜಾರಿ, ಉಪ್ಪೂರು ಗ್ರಾಮ ಪಂಚಾಯತ್ ಸದಸ್ಯರಾದ ರಾಜೇಶ್ವರಿ, ಪ್ರಕಾಶ್ ದೇವಾಡಿಗ, ಸಂತೋಷ್, ಅವಿನಾಶ್ ಶೆಟ್ಟಿ, ನೇತ್ರಾವತಿ, ಲಲಿತಾ, ಮಹೇಶ್ ಕೋಟ್ಯಾನ್ ಮತ್ತು ಸುಮತಿ ಕೋಟ್ಯಾನ್, ಮಾಜಿ ಸದಸ್ಯ ನಾರಾಯಣ ಶೆಟ್ಟಿ ಮತ್ತು ಶಾಸಕರ ಪತ್ನಿ ಶಿಲ್ಪಾ ಆರ್. ಭಟ್ ಮತ್ತು ಪುತ್ರ ರೆಯಾಂಶು ಹಾಗೂ ಪಕ್ಷದ ಹಿರಿಯರು, ಪ್ರಮುಖರು, ಕಾರ್ಯಕರ್ತರು ಇದ್ದರು

ನಿಮಗೆ ಈ ಸುದ್ದಿ ಇಷ್ಟವಾಯ್ತಾ?
ಹಾಗಾದರೆ ಇತರರಿಗೂ SHARE ಮಾಡಿ ಓದಿಸಿ...

ಕಾಮೆಂಟ್ ಮಾಡಿ

error: Content is protected !!