ಸುದ್ದಿಕಿರಣ ವರದಿ
ಶನಿವಾರ, ಜೂನ್ 4
ತೇಜಸ್ವಿ ಸೂರ್ಯಗೆ ಆಸ್ಟ್ರೇಲಿಯಾದಲ್ಲಿ ಗೌರವ
ಆಸ್ಟ್ರೇಲಿಯಾ: ಭಾರತ ಸರ್ಕಾರದ ಕಾರ್ಯ ನಿಮಿತ್ತವಾಗಿ ಇಲ್ಲಿನ ಮೆಲ್ಬೋರ್ನ್ ಮಹಾನಗರಕ್ಕೆ ಆಗಮಿಸಿದ ಸಂಸದ ತೇಜಸ್ವಿ ಸೂರ್ಯ ಅವರನ್ನು ಉಡುಪಿ ಅಷ್ಟಮಠಗಳಲ್ಲೊಂದಾದ ಪುತ್ತಿಗೆ ಶಾಖಾಮಠ ಶ್ರೀ ವೇಂಕಟಕೃಷ್ಣ ಬೃಂದಾವನ ಮತ್ತು ಕನ್ನಡ ಸಂಘ ವತಿಯಿಂದ ಆತ್ಮೀಯವಾಗಿ ಸ್ವಾಗತಿಸಿ, ಅಭಿನಂದಿಸಲಾಯಿತು. ದೇವರ ಪ್ರಸಾದ ನೀಡಲಾಯಿತು.
ಆಸ್ಟ್ರೇಲಿಯಾದಲ್ಲಿ ಭಾವಿ ಪರ್ಯಾಯ ಪುತ್ತಿಗೆ ಶ್ರೀ ಸುಗುಣೇಂದ್ರತೀರ್ಥ ಶ್ರೀಪಾದರು ಕೈಗೊಂಡಿರುವ ಕಾರ್ಯಗಳನ್ನು ತಿಳಿದು ಸಂಸದ ತೇಜಸ್ವಿ ಸೂರ್ಯ ಅವರು ಸಂತಸ ವ್ಯಕ್ತಪಡಿಸಿದರು.