Monday, July 4, 2022
Home ಸಮಾಚಾರ ರಾಜ್ಯ ವಾರ್ತೆ ಮುಳಿಯ ಪ್ರಶಸ್ತಿಗೆ ಕೆ. ಟಿ. ಗಟ್ಟಿ ಆಯ್ಕೆ

ಮುಳಿಯ ಪ್ರಶಸ್ತಿಗೆ ಕೆ. ಟಿ. ಗಟ್ಟಿ ಆಯ್ಕೆ

ಉಡುಪಿ: ಇಲ್ಲಿನ ರಾಷ್ಟ್ರಕವಿ ಗೋವಿಂದ ಪೈ ಸಂಶೋಧನ ಕೇಂದ್ರ, ಹಿರಿಯ ವಿದ್ವಾಂಸ ಮುಳಿಯ ತಿಮ್ಮಪ್ಪಯ್ಯ ಹೆಸರಿನಲ್ಲಿ ನೀಡುವ ಮುಳಿಯ ತಿಮ್ಮಪ್ಪಯ್ಯ ಪ್ರಶಸ್ತಿಗೆ ಪ್ರಸಿದ್ಧ ಲೇಖಕ, ಕಾದಂಬರಿಕಾರ, ವಿಶ್ರಾಂತ ಪತ್ರಕರ್ತ ಕೆ. ಟಿ ಗಟ್ಟಿ ಆಯ್ಕೆಯಾಗಿದ್ದಾರೆ.

ಹಿರಿಯ ವಿದ್ವಾಂಸ ಪ್ರೊ. ಬಿ. ಎ. ವಿವೇಕ ರೈ ಅಧ್ಯಕ್ಷರಾಗಿರುವ ಆಯ್ಕೆ ಸಮಿತಿ ಈ ಆಯ್ಕೆ ಪ್ರಕಟಿಸಿದೆ ಎಂದು ರಾಷ್ಟ್ರಕವಿ ಗೋವಿಂದ ಪೈ ಸಂಶೋಧನ ಕೇಂದ್ರ ಆಡಳಿತಾಧಿಕಾರಿ ಡಾ| ಬಿ. ಜಗದೀಶ ಶೆಟ್ಟಿ ತಿಳಿಸಿದ್ದಾರೆ. ಪ್ರಶಸ್ತಿ 10 ಸಾವಿರ ರೂ. ನಗದು ಮತ್ತು ಪ್ರಶಸ್ತಿಪತ್ರ ಒಳಗೊಂಡಿದೆ.

ಕೆ. ಟಿ. ಗಟ್ಟಿ ಅವರು ಕೇರಳ ವಿ.ವಿ.ಯಿಂದ ಇಂಗ್ಲಿಷ್ ಎಂ.ಎ ಪದವಿ ಪಡೆದು ಸ್ವದೇಶದಲ್ಲಿ 18 ವರ್ಷ ಹಾಗೂ ವಿದೇಶದಲ್ಲಿ 8 ವರ್ಷ ಕಾಲ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿದ್ದಾರೆ. ಲಂಡನ್ ನ ಟ್ರಿನಿಟಿ ಕಾಲೇಜಿನಿಂದ ಇಂಗ್ಲಿಷ್ ಕಲಿಕೆಯ ಡಿಪ್ಲೊಮಾ ಮತ್ತು ಆಕ್ಸ್ಫರ್ಡ್ ನ ಕಾಲೇಜ್ ಆಫ್ ಪ್ರಿಸೆಪ್ಟರ್ಸ್ನಿಂದ ಶಿಕ್ಷಣ ಡಿಪ್ಲೊಮಾ ಪಡೆದಿದ್ದಾರೆ. ಪ್ರಬಂಧಕಾರ, ರಂಗತಜ್ಞ, ಕಾದಂಬರಿಕಾರ, ನಾಟಕಕಾರ, ಅನುವಾದಕರಾಗಿಯೂ ಸೇವೆ ಸಲ್ಲಿಸಿದ್ದಾರೆ.

ಭಾಷಾಧ್ಯಯನದ ಇಂಗ್ಲಿಷ್ ಪುಸ್ತಕಗಳು, ಇಂಗ್ಲಿಷ್ ಕನ್ನಡ ಕಲಿಕೆಯ ಪುಸ್ತಕಗಳು ಅವರ ಭಾಷಾ ಶಿಕ್ಷಣದ ಕೊಡುಗೆಗಳಾಗಿವೆ. ಇಂಗ್ಲಿಷ್ ಕವನಗಳನ್ನು ಅವರು ತುಳು ಭಾಷೆಗೆ ಅನುವಾದಿಸಿದ್ದಾರೆ. ಕರ್ನಾಟಕ ಸಾಹಿತ್ಯ ಅಕಾಡೆಮಿ ಗೌರವ ಪ್ರಶಸ್ತಿ, ಸಂದೇಶ ಪ್ರಶಸ್ತಿ, ನಿರಂಜನ ಪ್ರಶಸ್ತಿ, ಚದುರಂಗ ಪ್ರಶಸ್ತಿ, ಉಗ್ರಾಣ ಪ್ರಶಸ್ತಿ, ಉಡುಪಿ ರಥಬೀದಿ ಗೆಳೆಯರು ಬಳಗದ ಸವ್ಯಸಾಚಿ ಮುಂತಾದ ಪ್ರಶಸ್ತಿಗಳಿಗೆ ಅವರು ಭಾಜನರಾಗಿದ್ದಾರೆ

ನಿಮಗೆ ಈ ಸುದ್ದಿ ಇಷ್ಟವಾಯ್ತಾ?
ಹಾಗಾದರೆ ಇತರರಿಗೂ SHARE ಮಾಡಿ ಓದಿಸಿ...

ಕಾಮೆಂಟ್ ಮಾಡಿ

error: Content is protected !!