Wednesday, July 6, 2022
Home ಸಮಾಚಾರ ರಾಜ್ಯ ವಾರ್ತೆ ಕೊನೆಗೂ ಆನೆಯಿಂದಿಳಿದು ಕಮಲ ಹಿಡಿದ ಶಾಸಕ: ಆ. 5ರಂದು ಎನ್. ಮಹೇಶ್ ಬಿಜೆಪಿ ಸೇರ್ಪಡೆ

ಕೊನೆಗೂ ಆನೆಯಿಂದಿಳಿದು ಕಮಲ ಹಿಡಿದ ಶಾಸಕ: ಆ. 5ರಂದು ಎನ್. ಮಹೇಶ್ ಬಿಜೆಪಿ ಸೇರ್ಪಡೆ

ಕೊನೆಗೂ ಆನೆಯಿಂದಿಳಿದು ಕಮಲ ಹಿಡಿದ ಶಾಸಕ: ಆ. 5ರಂದು ಎನ್. ಮಹೇಶ್ ಬಿಜೆಪಿ ಸೇರ್ಪಡೆ

(ಸುದ್ದಿಕಿರಣ ವರದಿ)

ಚಾಮರಾಜನಗರ: ಸಾಕಷ್ಟು ರಾಜಕೀಯ ಪ್ರಹಸನಗಳ ನಂತರ ಬಿಎಸ್.ಪಿ. ಉಚ್ಚಾಟಿತ ಶಾಸಕ ಎನ್. ಮಹೇಶ್, ಕಮಲ ಪಡೆ ಸೇರಲು ಮನಸ್ಸು ಮಾಡಿದ್ದಾರೆ. ಆ. 5ರಂದು ಹಾಲಿ ಪಕ್ಷೇತರ ಶಾಸಕ ಎನ್. ಮಹೇಶ್ ತನ್ನ ಬೆಂಬಲಿಗರೊಂದಿಗೆ ಬಿಜೆಪಿ ಸೇರ್ಪಡೆಗೊಳ್ಳಲಿದ್ದಾರೆ.

ಬೆಂಗಳೂರಿನ ಬಿಜೆಪಿ ಕಚೇರಿಯಲ್ಲಿ ನಡೆಯಲಿರುವ ಸರಳ ಸಮಾರಂಭದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಸಮ್ಮುಖದಲ್ಲಿ ಬಿಜೆಪಿಗೆ ಸೇರಲಿದ್ದಾರೆ.

ಈಗಾಗಲೇ ಮಾಜಿ ಸಿಎಂ ಬಿಎಸ್.ವೈ. ಅವರನ್ನು ಭೇಟಿ ಮಾಡಿರುವ ಮಹೇಶ್, ಪಕ್ಷ ಸೇರ್ಪಡೆ ಕುರಿತು ಚರ್ಚೆ ನಡೆಸಿದ್ದಾರೆ ಎನ್ನಲಾಗಿದೆ. ಮಾತ್ರವಲ್ಲದೆ, ಕೊಳ್ಳೆಗಾಲ ಶಾಸಕ ಎನ್. ಮಹೇಶ್ ಬಿಜೆಪಿ ಸೇರ್ಪಡೆ ವಿರೋಧಿಸಿರುವ ಸ್ಥಳೀಯ ಬಿಜೆಪಿ ನಾಯಕರ ಮನವೊಲಿಕೆ ಪ್ರಯತ್ನದಲ್ಲೂ ನಿರತರಾಗಿದ್ದಾರೆ.

ಕಳೆದ ಚುನಾವಣೆಯಲ್ಲಿ ಬಿಎಸ್.ಪಿ.ಯಿಂದ ಕೊಳ್ಳೆಗಾಲ ಕ್ಷೇತ್ರದಲ್ಲಿ ಸ್ಪರ್ಧಿಸಿದ್ದ ಎನ್. ಮಹೇಶ್ ವಿರುದ್ಧ ಬಿಜೆಪಿಯ ಮಾಜಿ ಶಾಸಕ ಜಿ. ಎನ್. ನಂಜುಡಸ್ವಾಮಿ ಸೋತಿದ್ದರು. ಈ ನಿಟ್ಟಿನಲ್ಲಿ ಎನ್. ಮಹೇಶ್ ಬಿಜೆಪಿ ಸೇರ್ಪಡೆಗೆ ಜಿ. ಎನ್. ನಂಜುಡಸ್ವಾಮಿ ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ.

ನಂಜುಂಡಸ್ವಾಮಿ ನಿವಾಸಕ್ಕೂ ಭೇಟಿ ನೀಡಿರುವ ಎನ್. ಮಹೇಶ್, ಅವರ ಮನವೊಲಿಸುವ ಪ್ರಯತ್ನ ಮಾಡಿದ್ದಾರೆ.

ನಿಮಗೆ ಈ ಸುದ್ದಿ ಇಷ್ಟವಾಯ್ತಾ?
ಹಾಗಾದರೆ ಇತರರಿಗೂ SHARE ಮಾಡಿ ಓದಿಸಿ...

ಕಾಮೆಂಟ್ ಮಾಡಿ

error: Content is protected !!