Saturday, August 13, 2022
Home ಸಮಾಚಾರ ರಾಜ್ಯ ವಾರ್ತೆ ಸಮಾಜ ವಿಜ್ಞಾನ ಪಠ್ಯದಲ್ಲಿ ನಾರಾಯಣ ಗುರು ವಿಚಾರ

ಸಮಾಜ ವಿಜ್ಞಾನ ಪಠ್ಯದಲ್ಲಿ ನಾರಾಯಣ ಗುರು ವಿಚಾರ

ಸುದ್ದಿಕಿರಣ ವರದಿ
ಮಂಗಳವಾರ, ಜುಲೈ 12

ಸಮಾಜ ವಿಜ್ಞಾನ ಪಠ್ಯದಲ್ಲಿ ನಾರಾಯಣ ಗುರು ವಿಚಾರ
ಬೆಂಗಳೂರು: ಬ್ರಹ್ಮಶ್ರೀ ನಾರಾಯಣ ಗುರು ವಿಚಾರವನ್ನು ಕನ್ನಡ ವಿಷಯ ಪಠ್ಯದಿಂದ ತೆಗೆದು ಸಮಾಜ ವಿಜ್ಞಾನ ಪಠ್ಯದಲ್ಲಿ ಅಳವಡಿಸಲು ಶಿಕ್ಷಣ ಸಚಿವ ಬಿ. ಸಿ. ನಾಗೇಶ್ ಸೂಚಿಸಿದ್ದಾರೆ.

ಈ ಕುರಿತು ಅಧಿಕೃತ ಸರ್ಕಾರಿ ಆದೇಶ ಹೊರಡಿಸಲಾಗಿದೆ.

ನಾರಾಯಣ ಗುರುಗಳ ವಿಚಾರವನ್ನು ಕನ್ನಡ ವಿಷಯ ಪಠ್ಯದಲ್ಲಿ ಅಳವಡಿಸಿರುವ ಬಗ್ಗೆ ಬಿಲ್ಲವ ಸಂಘಟನೆಗಳು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದವು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ವಿ. ಸುನಿಲ್ ಕುಮಾರ್ ಕೂಡಾ ಸಮಾಜ ವಿಜ್ಞಾನ ವಿಷಯ ಪಠ್ಯದಲ್ಲಿ ನಾರಾಯಣ ಗುರು ವಿಚಾರ ಅಳವಡಿಸುವಂತೆ ಸಚಿವ ನಾಗೇಶ್ ಅವರನ್ನು ಆಗ್ರಹಿಸಿ, ಸರ್ಕಾರದ ಮೇಲೆ ಒತ್ತಡ ಹೇಳಿದ್ದರು.

ಸರ್ಕಾರದ ನಡೆಯಿಂದ ಬಿಲ್ಲವ ಸಂಘಟನೆಗಳು ಸಂತಸಗೊಂಡಿದ್ದು, ಉದ್ದೇಶಿತ ಪ್ರತಿಭಟನೆ ಕೈಬಿಡಲು ನಿರ್ಧರಿಸಿವೆ.

ನಿಮಗೆ ಈ ಸುದ್ದಿ ಇಷ್ಟವಾಯ್ತಾ?
ಹಾಗಾದರೆ ಇತರರಿಗೂ SHARE ಮಾಡಿ ಓದಿಸಿ...

ಕಾಮೆಂಟ್ ಮಾಡಿ

error: Content is protected !!