ಮಣಿಪಾಲ ಕೆಎಂಸಿ ಆಸ್ಪತ್ರೆಗೆ ನರ್ಸಿಂಗ್ ಶ್ರೇಷ್ಠತಾ ಪ್ರಶಸ್ತಿ
(ಸುದ್ದಿಕಿರಣ ವರದಿ)
ಮಣಿಪಾಲ: ಅಸೋಸಿಯೇಶನ್ ಆಫ್ ಹೆಲ್ತ್ ಕೇರ್ ಪ್ರೊವೈಡರ್ಸ್ (ಎ.ಎಚ್.ಪಿ.ಐ) ಆರೋಗ್ಯ ಶ್ರೇಷ್ಠತೆಗಾಗಿ ನೀಡುವ 2021ನೇ ಸಾಲಿನ ನರ್ಸಿಂಗ್ ಎಕ್ಸಲೆನ್ಸ್ ಪ್ರಶಸ್ತಿಗೆ ಮಣಿಪಾಲ ಕಸ್ತೂರ್ಬಾ ಮೆಡಿಕಲ್ ಕಾಲೇಜು (ಕೆಎಂಸಿ) ಆಸ್ಪತ್ರೆ ಪಾತ್ರವಾಗಿದೆ.
ಕೆಎಂಸಿ ಡೀನ್ ಡಾ. ಶರತ್ ಕೆ. ರಾವ್ ನರ್ಸಿಂಗ್ ಸೇವೆಗಳ ಮುಖ್ಯಸ್ಥೆ ಶುಭ ಸೂರಿಯ ಅವರಿಗೆ ಪ್ರಶಸ್ತಿ ಹಸ್ತಾಂತರಿಸಿದರು.
ಆಸ್ಪತ್ರೆ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸಿ. ಜಿ. ಮುತ್ತಣ, ವೈದ್ಯಕೀಯ ಅಧೀಕ್ಷಕ ಡಾ. ಅವಿನಾಶ ಶೆಟ್ಟಿ ಮತ್ತು ಗುಣಮಟ್ಟ ಅನುಷ್ಠಾನ ಸಲಹೆಗಾರ ಡಾ. ಸುನೀಲ್ ಸಿ. ಮುಂಡ್ಕೂರ್ ಇದ್ದರು.
ಅಸೋಸಿಯೇಶನ್ ಆಫ್ ಹೆಲ್ತ್ ಕೇರ್ ಪ್ರೊವೈಡರ್ಸ್ ಸಂಸ್ಥೆ ಭಾರತದಲ್ಲಿ ಹೆಲ್ತ್ ಕೇರ್ ಸಂಸ್ಥೆಗಳ ಪ್ರತಿನಿಧಿ ಸಂಸ್ಥೆಯಾಗಿ ಗುರುತಿಸಲ್ಪಟ್ಟಿದೆ. ಪ್ರತಿ ವರ್ಷ ಆರೋಗ್ಯ ಕ್ಷೇತ್ರದಲ್ಲಿ ಸಂಸ್ಥೆಗಳು ಸಾಧಿಸಿದ ಶ್ರೇಷ್ಠತೆಯನ್ನು ಗುರುತಿಸಿ, ಪ್ರಶಸ್ತಿ ನೀಡಿ ಗೌರವಿಸುತ್ತದೆ.
ರೋಗಿಗಳ ಆರೈಕೆ, ರೋಗಿಯ ಶಿಕ್ಷಣ ಮತ್ತು ಅರಿವು, ಶುಶ್ರೂಷೆ, ಸಂಪನ್ಮೂಲ ನಿರ್ವಹಣೆ, ಆರೈಕೆ ಗುಣಮಟ್ಟ, ಸಂವಹನ ಮತ್ತು ಮಾರ್ಗದರ್ಶನ ಹಾಗೂ ಸೋಂಕು ನಿಯಂತ್ರಣ ಮೊದಲಾದ ಶುಶ್ರೂಷೆಯ ಎಲ್ಲ ಕ್ಷೇತ್ರಗಳಲ್ಲಿ ಅಂತಾರಾಷ್ಟ್ರೀಯ ಗುಣಮಟ್ಟ ಕಾಯ್ದುಕೊಳ್ಳುವ ಆಸ್ಪತ್ರೆಗೆ ಈ ಪ್ರಶಸ್ತಿ ನೀಡಲಾಗುತ್ತದೆ