Thursday, July 7, 2022
Home ಸಮಾಚಾರ ಜಿಲ್ಲಾ ಸುದ್ದಿ ನೀಲಾವರ ಗೋಶಾಲೆಯಲ್ಲಿ ಗೋಸೇವೆ

ನೀಲಾವರ ಗೋಶಾಲೆಯಲ್ಲಿ ಗೋಸೇವೆ

ಉಡುಪಿ: ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಜನ್ಮದಿನಾಚರಣೆ ಅಂಗವಾಗಿ ಮತ್ತು ಈಚೆಗೆ ರಾಜ್ಯ ಸರಕಾರ ಜಾರಿಗೆ ತಂದ ಗೋಹತ್ಯೆ ನಿಷೇಧ ಕಾಯ್ದೆಯನ್ನು ಸ್ವಾಗತಿಸಿ ಶುಕ್ರವಾರ ಜಿಲ್ಲಾ ಬಿಜೆಪಿ ಯುವಮೋರ್ಚಾ ವತಿಯಿಂದ ನೀಲಾವರ ಗೋಶಾಲೆಯಲ್ಲಿ ಗೋಪೂಜೆ ನಡೆಸಲಾಯಿತು. ಆ ನಿಮಿತ್ತ ಗೋಶಾಲೆಯನ್ನು ಸ್ವಚ್ಛಗೊಳಿಸಲಾಯಿತು.

ಯುವಮೋರ್ಚಾ ಜಿಲ್ಲಾಧ್ಯಕ್ಷ ವಿಖ್ಯಾತ್ ಶೆಟ್ಟಿ ಮಾತನಾಡಿ, ಅಟಲ್ ಅಜಾತ ಶತ್ರು ಮಾತ್ರವಲ್ಲ, ನಿಜಾರ್ಥದಲ್ಲಿ ವಿಶ್ವ ಮಾನವ ಎಂಬುದಕ್ಕೆ ಅವರ ನಡೆ, ನುಡಿ ಸಾಕ್ಷಿ. ಅತ್ಯಂತ ಸರಳ ಜೀವನ ಶೈಲಿ ಅಳವಡಿಸಿಕೊಂಡಿದ್ದ ವಾಜಪೇಯಿ ಯಾರ ಮನಸ್ಸನ್ನೂ ನೋವಿಸಿದವರಲ್ಲ. ಪ್ರತಿಪಕ್ಷಗಳನ್ನೂ ಗೌರವದಿಂದ ಕಾಣುತ್ತಿದ್ದರು ಎಂದು ಸ್ಮರಿಸಿದರು.

ರಾಜ್ಯ ಯುವಮೋರ್ಚಾ ಕಾರ್ಯದರ್ಶಿ ಶ್ವೇತಾ, ದೇಶದಲ್ಲಿ ಗೋಹತ್ಯೆ ನಿಷೇಧ ಆಗಬೇಕೆಂದು ಅಟಲ್ ಬಹಳ ಪ್ರಯತ್ನಪಟ್ಟಿದ್ದರು. ರಾಜ್ಯದಲ್ಲಿ ಅವರ ಆಶಯ ಈಡೇರಿದೆ ಎಂದರು.

ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಶರತ್ ಶೆಟ್ಟಿ ಉಪ್ಪುಂದ ಮತ್ತು ವಿನೋದ್ ಪೂಜಾರಿ ಶಾಂತಿನಿಕೇತನ, ಕಾರ್ಯದರ್ಶಿ ಅಭಿರಾಜ್ ಸುವರ್ಣ ಮೊದಲಾದವರಿದ್ದರು

ನಿಮಗೆ ಈ ಸುದ್ದಿ ಇಷ್ಟವಾಯ್ತಾ?
ಹಾಗಾದರೆ ಇತರರಿಗೂ SHARE ಮಾಡಿ ಓದಿಸಿ...

ಕಾಮೆಂಟ್ ಮಾಡಿ

error: Content is protected !!