ಬೊಮ್ಮಾಯಿ ಸಂಪುಟದಲ್ಲಿ 13 ಜಿಲ್ಲೆಗಳಿಗೆ ಪ್ರಾತಿನಿಧ್ಯವಿಲ್ಲ
(ಸುದ್ದಿಕಿರಣ ವರದಿ)
ಬೆಂಗಳೂರು: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೂತನ ಸಂಪುಟ ರಚನೆಯಾಗಿದ್ದು, ಬುಧವಾರ 29 ಸಚಿವರು ಪ್ರಮಾಣ ವಚನ ಸ್ವೀಕರಿಸಿದರು.
ರಾಜಭವನದ ಗಾಜಿನ ಮನೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಪ್ರತಿಜ್ಞಾವಿಧಿ ಬೋಧಿಸಿದರು.
ಬೊಮ್ಮಾಯಿ ಸಂಪುಟದಲ್ಲಿ 13 ಜಿಲ್ಲೆಗಳಿಗೆ ಪ್ರಾತಿನಿಧ್ಯ ಲಭಿಸಿಲ್ಲ. ಮೈಸೂರು, ಕಲ್ಬುರ್ಗಿ, ರಾಮನಗರ, ಕೊಡಗು, ರಾಯಚೂರು, ಹಾಸನ, ವಿಜಯಪುರ, ಬಳ್ಳಾರಿ, ದಾವಣಗೆರೆ, ಕೋಲಾರ, ಯಾದಗಿರಿ ಮತ್ತು ಚಿಕ್ಕಮಗಳೂರು ಜಿಲ್ಲೆಗಳ ಯಾವುದೇ ಶಾಸಕರಿಗೆ ಈ ಬಾರಿಯ ಮಂತ್ರಿ ಮಂಡಲದಲ್ಲಿ ಅವಕಾಶ ನೀಡಿಲ್ಲ.
ಉಡುಪಿ ಜಿಲ್ಲೆಯ ಒಂದೇ ಸಮುದಾಯದ ಇಬ್ಬರಿಗೆ ಅವಕಾಶ ನೀಡಲಾಗಿದೆ. ಬೆಂಗಳೂರು ನಗರಕ್ಕೆ 7 ಸಚಿವ ಭಾಗ್ಯ ಸಿಕ್ಕಿದೆ.
ನೂತನ ಸಚಿವರು
ಕೆ. ಎಸ್. ಈಶ್ವರಪ್ಪ, ಆರ್. ಅಶೋಕ್, ಡಾ. ಸಿ. ಎನ್. ಅಶ್ವತ್ಥನಾರಾಯಣ, ಉಮೇಶ್ ಕತ್ತಿ, ಎಸ್. ಟಿ. ಸೋಮಶೇಖರ್, ಡಾ. ಕೆ. ಸುಧಾಕರ್, ಬೈರತಿ ಬಸವರಾಜ, ಮುರುಗೇಶ್ ನಿರಾಣಿ, ಶಿವರಾಮ ಹೆಬ್ಬಾರ್, ಶಶಿಕಲಾ ಜೊಲ್ಲೆ, ಕೆ. ಸಿ. ನಾರಾಯಣ ಗೌಡ, ಸುನಿಲ್ ಕುಮಾರ್, ಆರಗ ಜ್ಞಾನೇಂದ್ರ, ಗೋವಿಂದ ಕಾರಜೋಳ, ಮುನಿರತ್ನ, ಎಂ. ಟಿ. ಬಿ. ನಾಗರಾಜ್, ಗೋಪಾಲಯ್ಯ, ಮಾಧುಸ್ವಾಮಿ, ಹಾಲಪ್ಪ ಆಚಾರ್, ಶಂಕರ ಪಾಟೀಲ್ ಮುನೇನಕೊಪ್ಪ, ಕೋಟ ಶ್ರೀನಿವಾಸ ಪೂಜಾರಿ, ಪ್ರಭು ಚವ್ಹಾಣ್, ವಿ. ಸೋಮಣ್ಣ, ಎಸ್. ಅಂಗಾರ, ಆನಂದ ಸಿಂಗ್, ಸಿ. ಸಿ. ಪಾಟೀಲ್, ಬಿ. ಸಿ. ನಾಗೇಶ್, ಬಿ. ಶ್ರೀರಾಮುಲು ಮತ್ತು ಬಿ.ಸಿ. ಪಾಟೀಲ್.
ಸಚಿವ ಸ್ಥಾನ ಆಕಾಂಕ್ಷಿಗಳಾಗಿದ್ದ ಕೆಲವು ಶಾಸಕರು ಬೇಸರಗೊಂಡಿದ್ದು, ಅಸಮಾಧಾನ ಭುಗಿಲೆದ್ದಿದೆ