Monday, July 4, 2022
Home ಸಮಾಚಾರ ಜಿಲ್ಲಾ ಸುದ್ದಿ ಶ್ರೀನಿವಾಸ ಗೌಡ ವಿಷಯಕ್ಕೂ ಶ್ರೀರಾಮಸೇನೆಗೂ ಸಂಬಂಧವಿಲ್ಲ

ಶ್ರೀನಿವಾಸ ಗೌಡ ವಿಷಯಕ್ಕೂ ಶ್ರೀರಾಮಸೇನೆಗೂ ಸಂಬಂಧವಿಲ್ಲ

ಉಡುಪಿ: ಕಂಬಳ ಓಟಗಾರ ಶ್ರೀನಿವಾಸ ಗೌಡ ಅವರಿಗೆ ಶ್ರೀರಾಮಸೇನೆ ಕಾರ್ಯಕರ್ತನಿಂದ ಬೆದರಿಕೆ ಕರೆ, ಅವಾಚ್ಯ ಪದಗಳಿಂದ ನಿಂದನೆ, ದೂರು ದಾಖಲು ಎಂಬಿತ್ಯಾದಿ ವಿಚಾರ ಮಾಧ್ಯಮ ಹಾಗೂ ಸಾಮಾಜಿಕ ಜಾಲತಾಣದಲ್ಲಿ ಬರುತ್ತಿದ್ದು, ಇದು ಸತ್ಯಕ್ಕೆ ದೂರವಾದ ಸಂಗತಿ.

ಇದು ನಮ್ಮ ಸಂಘಟನೆಯ ಕಾರ್ಯಕರ್ತರಲ್ಲಿ ಕಳವಳವುಂಟುಮಾಡಿದೆ. ಶ್ರೀರಾಮ ಸೇನೆ ಸಂಘಟನೆಗೂ ಈ ವಿಷಯಕ್ಕೂ ಯಾವುದೇ ಸಂಬಂಧ ಇಲ್ಲ ಎಂದು ಶ್ರೀರಾಮಸೇನೆಯ ಉಡುಪಿ ಜಿಲ್ಲಾಧ್ಯಕ್ಷ ಜಯರಾಂ ಅಂಬೆಕಲ್ಲು ಸ್ಪಷ್ಟಪಡಿಸಿದ್ದಾರೆ.

ಪ್ರಶಾಂತ ಬಂಗೇರ ಎಂಬವರು ರಾಮ ಸೇನಾ ಸಂಘಟನೆಯ ಜವಾಬ್ದಾರಿಯ ಮುಖಂಡರಾಗಿದ್ದು, ಶ್ರೀರಾಮ ಸೇನೆಗೂ ರಾಮ ಸೇನಾಗೂ ಯಾವುದೇ ಸಂಬಂಧ ಇಲ್ಲ.

ಈ ಘಟನೆ ಸಂಬಂಧ ಇಬ್ಬರೂ ಕಂಬಳ ಪ್ರೇಮಿಗಳಾಗಿರುವುದರಿಂದ ಮತ್ತು ಅಚಾನಕ್ ಆಗಿರುವ ತಪ್ಪನ್ನು ಶಾಸಕರೂ, ಮೂಡುಬಿದಿರೆ ಕಂಬಳದ ಮುಂದಾಳು ಉಮಾನಾಥ ಕೋಟ್ಯಾನ್ ಮತ್ತು ಕಂಬಳ ಮುಖಂಡರು ಬಗೆಹರಿಸಬೇಕು ಎಂದು ಉಡುಪಿ ಜಿಲ್ಲಾ ಶ್ರೀರಾಮಸೇನೆ ಸಂಬಂಧಪಟ್ಟವರನ್ನು ಆಗ್ರಹಿಸುತ್ತದೆ ಎಂದು ಅಂಬೆಕಲ್ಲು ತಿಳಿಸಿದ್ದಾರೆ.

ನಿಮಗೆ ಈ ಸುದ್ದಿ ಇಷ್ಟವಾಯ್ತಾ?
ಹಾಗಾದರೆ ಇತರರಿಗೂ SHARE ಮಾಡಿ ಓದಿಸಿ...

ಕಾಮೆಂಟ್ ಮಾಡಿ

error: Content is protected !!