ಉಡುಪಿ: ಅಯೋಧ್ಯೆ ಶ್ರೀರಾಮ ಮಂದಿರ ನಿಧಿ ಸಂಗ್ರಹ ಕಾರ್ಯದಲ್ಲಿ ನಿರತರಾಗಿರುವ ಅಯೋಧ್ಯೆ ಶ್ರೀರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್ ವಿಶ್ವಸ್ಥರೂ ಆಗಿರುವ ಪೇಜಾವರ ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಪಾದರು ಕೇರಳ ರಾಜ್ಯದಲ್ಲಿ ಪ್ರವಾಸದಲ್ಲಿದ್ದು, ಅಲ್ಲಿನ ಹೈಕೋರ್ಟ್ ನ್ಯಾಯಾಧೀಶ ಗೋಪಿ ಪೂಜಂಕರ್ ಅವರ ಎರ್ನಾಕುಲಮ್ ನಲ್ಲಿರುವ ನಿವಾಸಕ್ಕೆ ನ್ಯಾ| ಪೂಜಂಕರ್ ವಿನಂತಿ ಮೇರೆಗೆ ಶುಕ್ರವಾರ ತೆರಳಿದ್ದರು.
ನ್ಯಾ| ಪೂಜಂಕರ್ ಅವರು ಶ್ರೀಗಳನ್ನು ಭಕ್ತಿ ಗೌರವಗಳಿಂದ ನಿವಾಸಕ್ಕೆ ಬರಮಾಡಿಕೊಂಡು ಶ್ರೀಗಳವರಿಗೆ ಗುರುಪೂಜೆ ನಡೆಸಿದರು. ನ್ಯಾ| ಪೂಜಂಕರ್ ಕುಟುಂಬ ಭಾಗವಹಿಸಿತ್ತು.
ಅಯೋಧ್ಯೆ ರಾಮ ಮಂದಿರಕ್ಕಾಗಿ ನ್ಯಾ| ಗೋಪಿ ಪೂಜಂಕರ್ 25 ಸಾವಿರ ರೂ. ದೇಣಿಗೆ ನೀಡಿದರು.
ಶ್ರೀಗಳು ನ್ಯಾ| ಪೂಜಂಕರ್ ಅವರನ್ನು ಗೌರವಿಸಿ, ಶ್ರೀಕೃಷ್ಣಪ್ರಸಾದಪೂರ್ವಕ ಆಶೀರ್ವಾದ ಮಾಡಿದರು.
ನ್ಯಾI ಪೂಜಂಕರ್ 25 ಸಾವಿರ ರೂ. ದೇಣಿಗೆ ನೀಡಿದರು.