Saturday, July 2, 2022
Home ಸಮಾಚಾರ ಜಿಲ್ಲಾ ಸುದ್ದಿ ಮಲಬಾರ್ ಗೋಲ್ಡ್ ಆ್ಯಂಡ್ ಡೈಮಂಡ್ಸ್ ನಲ್ಲಿ ಒಡ್ಡಿಯನಮ್ ಉತ್ಸವ

ಮಲಬಾರ್ ಗೋಲ್ಡ್ ಆ್ಯಂಡ್ ಡೈಮಂಡ್ಸ್ ನಲ್ಲಿ ಒಡ್ಡಿಯನಮ್ ಉತ್ಸವ

ಉಡುಪಿ: ಕರಾವಳಿ ಕರ್ನಾಟಕದಲ್ಲಿ ಮೊತ್ತಮೊದಲ ಬಾರಿಗೆ ಇಲ್ಲಿನ ಮಲಬಾರ್ ಗೋಲ್ಡ್ ಆ್ಯಂಡ್ ಡೈಮಂಡ್ಸ್ ನಲ್ಲಿ ಡಿ. 27ರ ತನಕ ಒಡ್ಡಿಯನಮ್ (ಸೊಂಟಪಟ್ಟಿ) ಉತ್ಸವ ನಡೆಯಲಿದೆ.

ಈ ಉತ್ಸವದ ಸಂದರ್ಭದಲ್ಲಿ ವ್ಯಾಪಕ ಶ್ರೇಣಿಯ ಸರಳ, ಸ್ಟಡೆಡ್, ಪಾರಂಪರಿಕ ಹಾಗೂ ನವೀನ ವಿನ್ಯಾಸದ ಒಡ್ಡಿಯನಮ್ ಗಳ ಬೃಹತ್ ಸಂಗ್ರಹ ನೋಡಬಹುದಾಗಿದೆ.

ಒಡ್ಡಿಯನಮ್ ಉತ್ಸವದ ಅನಾವರಣವನ್ನು ಗ್ರಾಹಕರಾದ ಪ್ರೇರಣಾ ಭಟ್, ರಂಜಿತಾ ಶೇಟ್ ಉಡುಪಿ ಮತ್ತು ಸಿಂಚನ ಶೆಟ್ಟಿ ಕಮಲಶಿಲೆ ನಡೆಸಿದರು ಎಂದು ಶಾಖಾ ಮುಖ್ಯಸ್ಥ ಹಫೀಝ್ ರೆಹಮಾನ್ ತಿಳಿಸಿದರು.

ಹರ್ಷಿತ ಸ್ವಾಗತಿಸಿ, ರಾಘವೇಂದ್ರ ನಾಯಕ್ ವಂದಿಸಿದರು.

ಈ ಸಂದರ್ಭದಲ್ಲಿ ಮ್ಯಾನೇಜರ್ ಮುಸ್ತಫಾ ಎ.ಕೆ. ಗ್ರಾಹಕರು, ಸಿಬ್ಬಂದಿ ಇದ್ದರು.

ನಿಮಗೆ ಈ ಸುದ್ದಿ ಇಷ್ಟವಾಯ್ತಾ?
ಹಾಗಾದರೆ ಇತರರಿಗೂ SHARE ಮಾಡಿ ಓದಿಸಿ...

ಕಾಮೆಂಟ್ ಮಾಡಿ

error: Content is protected !!