Monday, July 4, 2022
Home ಸಮಾಚಾರ ಜಿಲ್ಲಾ ಸುದ್ದಿ ಒಡಿಯೂರು ಶ್ರೀ ಷಷ್ಠ್ಯಬ್ದಿ: ಜ್ಞಾನವಾಹಿನಿ ಸರಣಿ ಕಾರ್ಯಕ್ರಮ

ಒಡಿಯೂರು ಶ್ರೀ ಷಷ್ಠ್ಯಬ್ದಿ: ಜ್ಞಾನವಾಹಿನಿ ಸರಣಿ ಕಾರ್ಯಕ್ರಮ

ಉಡುಪಿ: ಒಡಿಯೂರು ಶ್ರೀಗುರುದೇವದತ್ತ ಸಂಸ್ಥಾನದ ಶ್ರೀ ಗುರುದೇವಾನಂದ ಸ್ವಾಮೀಜಿಯವರ ಷಷ್ಠ್ಯಬ್ದಿ ಸಂಭ್ರಮಾಚರಣೆ ಪ್ರಯುಕ್ತ ಉಡುಪಿ ಜಿಲ್ಲೆಯಲ್ಲಿ ಆರು ತಿಂಗಳ ಕಾಲ ಜ್ಞಾನ ವಾಹಿನಿ ಸರಣಿ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿದ್ದು, ಮಾ. 9ರಂದು ಚಾಲನೆ ನೀಡಲಾಗುವುದು ಎಂದು ಷಷ್ಠ್ಯಬ್ದಿ ಕಾರ್ಯಕ್ರಮದ ಜಿಲ್ಲಾ ಸಮಿತಿ ಉಪಾಧ್ಯಕ್ಷ ಜಯಕರ ಶೆಟ್ಟಿ ಇಂದ್ರಾಳಿ ತಿಳಿಸಿದ್ದಾರೆ.

ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸರಣಿ ಕಾರ್ಯಕ್ರಮಗಳಲ್ಲಿ 60 ಮನೆಗಳಲ್ಲಿ ಮನೆ ಮನೆ ಭಜನೆ, 60 ಮನೆ ಸತ್ಸಂಗ, ಹನುಮಾನ್ ಚಾಲೀಸ್ ಪಠಣ, 60 ಮನೆಗಳಿಗೆ ಮನೆಗೊಂದು ಗಂಧದ ಗಿಡ, 60 ಅಂಗನವಾಡಿ ಕೇಂದ್ರಗಳಿಗೆ ಮೂಲಭೂತ ಸೌಕರ್ಯ ಕೊಡುಗೆ, 60 ಜನಜಾಗೃತಿ ಸಮಾಜಮುಖಿ ಮಾಹಿತಿ ಶಿಬಿರ, 60 ಮಂದಿಗೆ ತುಳು ಲಿಪಿ ಬರಹ ಕಾರ್ಯಾಗಾರ, 60 ಮಂದಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಾಧಕರಿಗೆ ಗೌರವ, 60 ಮಂದಿ ದಿವ್ಯಾಂಗ ಮಕ್ಕಳ ಸಾಧನಶೀಲ ಪೋಷಕರ ಗುರುತಿಸುವಿಕೆ, ಗ್ರಾಮೀಣ ಕ್ರೀಡಾಕೂಟ ಮತ್ತು ಭಜನಾ ಸಮಾವೇಶ ಹೀಗೆ ಹತ್ತು ಹಲವು ಕಾರ್ಯಕ್ರಮಗಳನ್ನು ಸಮಿತಿ ಹಮ್ಮಿಕೊಂಡಿದೆ ಎಂದರು.

ಮಾ. 9ರಂದು ಮಧ್ಯಾಹ್ನ 2 ಗಂಟೆಯಿಂದ ಪರ್ಕಳ ಶ್ರೀಸುರಕ್ಷಾ ಸಭಾಭವನದಲ್ಲಿ ನಡೆಯಲಿರುವ ಈ ಕಾರ್ಯಕ್ರಮವನ್ನು ಒಡಿಯೂರು ಶ್ರೀಗಳು ಚಾಲನೆ ನೀಡಲಿರುವರು. ಇದೇ ವೇಳೆ ಒಡಿಯೂರು ಶ್ರೀ ಚಾರಿಟೇಬಲ್ ಟ್ರಸ್ಟ್ ಒಡಿಯೂರು ಗುರುದೇವದತ್ತ ಸಂಸ್ಥಾನಂ ಸಂಚಾಲಿತ, ಒಡಿಯೂರು ಶ್ರೀ ಗ್ರಾಮ ವಿಕಾಸ ಯೋಜನೆ, ಉಡುಪಿ ವಲಯದ 12 ಘಟಕ ಸಮಿತಿ, ಒಡಿಯೂರು ಶ್ರೀ ಗುರುದೇವ ಸೇವಾ ಬಳಗ, ವಜ್ರಮಾತಾ ಮಹಿಳಾ ವಿಕಾಸ ಕೇಂದ್ರದ ಪದಪ್ರದಾನ ನಡೆಯಲಿದೆ ಎಂದು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಉಡುಪಿ ಷಷ್ಠ್ಯಬ್ದಿ ಸಮಿತಿ ಅಧ್ಯಕ್ಷ ಉದ್ಯಮಿ ಸುರೇಶ್ ಶೆಟ್ಟಿ ಗುರ್ಮೆ, ಪ್ರಧಾನ ಕಾರ್ಯದರ್ಶಿ ಕೆ. ಪ್ರಭಾಕರ ಶೆಟ್ಟಿ ಕಬ್ಯಾಡಿ, ಕೋಶಾಧಿಕಾರಿ ಅಮಿತಾ ಗಿರೀಶ್, ಕೇಂದ್ರ ಸಮಿತಿ ಕಾರ್ಯದರ್ಶಿ ಕದ್ರಿ ನವನೀತ ಶೆಟ್ಟಿ ಮೊದಲಾದವರಿದ್ದರು

ನಿಮಗೆ ಈ ಸುದ್ದಿ ಇಷ್ಟವಾಯ್ತಾ?
ಹಾಗಾದರೆ ಇತರರಿಗೂ SHARE ಮಾಡಿ ಓದಿಸಿ...

ಕಾಮೆಂಟ್ ಮಾಡಿ

error: Content is protected !!