Saturday, August 13, 2022
Home ಸಮಾಚಾರ ಜಿಲ್ಲಾ ಸುದ್ದಿ ಸಮಸ್ಯೆಗೆ ತೆರೆದುಕೊಂಡಲ್ಲಿ ಅದ್ಭುತ ಜೀವನ

ಸಮಸ್ಯೆಗೆ ತೆರೆದುಕೊಂಡಲ್ಲಿ ಅದ್ಭುತ ಜೀವನ

ಸುದ್ದಿಕಿರಣ ವರದಿ
ಗುರುವಾರ, ಜುಲೈ 21

ಸಮಸ್ಯೆಗೆ ತೆರೆದುಕೊಂಡಲ್ಲಿ ಅದ್ಭುತ ಜೀವನ
ಮಲ್ಪೆ: ಯಾವುದೇ ಸಮಸ್ಯೆಗಳಿಗೆ ತೆರೆದುಕೊಂಡಲ್ಲಿ, ಅವುಗಳಲ್ಲಿ ಅರ್ಥ ಮಾಡಿಕೊಂಡಲ್ಲಿ ಅದ್ಭುತ ಜೀವನ ಅನುಭವಿಸಲು ಸಾಧ್ಯ ಎಂದು ರೋಟರಿ ಉಡುಪಿ ರಾಯಲ್ ಅಧ್ಯಕ್ಷ ಡಾ| ಬಾಲಕೃಷ್ಣ ಮದ್ದೋಡಿ ಹೇಳಿದರು.

ರೋಟರಿ ಉಡುಪಿ ರಾಯಲ್, ರೋಟರಿ ಪರ್ಕಳ, ಲಯನ್ಸ್ ಕ್ಲಬ್ ಉಡುಪಿ ಇಂದ್ರಾಳಿ ಮತ್ತು ಸಾಲಿಹಾತ್ ಶಿಕ್ಷಣ ಸಂಸ್ಥೆ ಸಂಯುಕ್ತವಾಗಿ ಮಣಿಪಾಲ ಕೆಎಂಸಿ ಸಮುದಾಯ ವೈದ್ಯಕೀಯ ವಿಭಾಗ ಸಹಯೋಗದೊಂದಿಗೆ ಹೂಡೆ ಸಾಲಿಹಾತ್ ಶಿಕ್ಷಣ ಸಂಸ್ಥೆಯಲ್ಲಿ ಏರ್ಪಡಿಸಿದ್ದ ಹದಿಹರೆಯದವರ ಆರೋಗ್ಯ ಮತ್ತು ನೈರ್ಮಲ್ಯ ಕುರಿತ ಜಾಗೃತಿ ಕಾರ್ಯಕ್ರಮದಲ್ಲಿ ಮಾತನಾಡಿದರು.

ಹದಿಹರೆಯ ಎಂಬುದು ಜೀವನದಲ್ಲಿ ಹೊಸ ವಿಷಯಗಳನ್ನು ಅರಿತುಕೊಳ್ಳುವ ವಯಸ್ಸು. ಸಮಸ್ಯೆ ಅರ್ಥ ಮಾಡಿಕೊಳ್ಳುವಲ್ಲಿ ನಿಮ್ಮನ್ನು ನೀವು ತೆರೆದುಕೊಂಡಲ್ಲಿ ಮತ್ತು ಪರಿಣಿತ ವೈದ್ಯರಿಂದ ಕಲಿಯಲು ಪ್ರಯತ್ನಿಸಿದಲ್ಲಿ ಅದ್ಭುತ ಜೀವನಕ್ಕೆ ಕಾರಣವಾಗುತ್ತದೆ ಎಂದರು.

ಆದ್ದರಿಂದ ತಜ್ಞರಿಂದ ಉತ್ತಮವಾದುದನ್ನು ಪಡೆಯಲು ಪ್ರಯತ್ನಿಸಿ ಮತ್ತು ಮುಕ್ತ ಮನಸ್ಸಿನಿಂದ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಪ್ರಯತ್ನಿಸಿ ಎಂದರು.

ರೋಟರಿ ಎಲ್ಲ ವಯೋಮಾನದವರಿಗೆ ಆರೋಗ್ಯ ಮತ್ತು ನೈರ್ಮಲ್ಯ ಕುರಿತ ಜಾಗೃತಿ ಕಾರ್ಯಕ್ರಮ ಆಯೋಜಿಸುತ್ತಿದೆ. ಅದರಿಂದ ಅವರ ಶಿಕ್ಷಣ ಮತ್ತು ವೃತ್ತಿ ಜೀವನವನ್ನು ಬೆಂಬಲಿಸುತ್ತದೆ ಎಂದರು.

ಕೆಎಂಸಿ ಮಣಿಪಾಲದ ಡಾ. ಎಫ್ರೋಜ್ ಖಾನ್, ಹದಿಹರೆಯದವರ ಆರೋಗ್ಯ ಬದಲಾವಣೆಗಳ ಬಗ್ಗೆ ಅರಿವು ಹಾಗೂ ಸ್ವಚ್ಛತೆ ಮತ್ತು ನೈರ್ಮಲ್ಯ ಕುರಿತು ಸಲಹೆ ನೀಡಿದರು.

ರೋಟರಿ ಪರ್ಕಳ ಅಧ್ಯಕ್ಷ ದಿನೇಶ್ ಹೆಗ್ಡೆ ಆತ್ರಾಡಿ, ಲಯನ್ಸ್ ಕ್ಲಬ್ ಉಡುಪಿ ಇಂದ್ರಾಳಿ ಅಧ್ಯಕ್ಷ ಮೋಹನ್ ಶೆಟ್ಟಿ, ಸಾಲಿಹಾತ್ ಸಂಸ್ಥೆ ನಿರ್ದೇಶಕ ಮಹಮ್ಮದ್ ಮೌಲಾ ಹಾಗೂ ರೋಟರಿ ಮತ್ತು ಲಯನ್ಸ್ ಸದಸ್ಯರು ಇದ್ದರು.

ನಿಮಗೆ ಈ ಸುದ್ದಿ ಇಷ್ಟವಾಯ್ತಾ?
ಹಾಗಾದರೆ ಇತರರಿಗೂ SHARE ಮಾಡಿ ಓದಿಸಿ...

ಕಾಮೆಂಟ್ ಮಾಡಿ

error: Content is protected !!