Sunday, October 2, 2022
Home ಸಮಾಚಾರ ಜಿಲ್ಲಾ ಸುದ್ದಿ ವಿಶ್ವ ಅಂಗದಾನ ಜಾಗೃತಿ ವಾಹನ ಜಾಥಾ

ವಿಶ್ವ ಅಂಗದಾನ ಜಾಗೃತಿ ವಾಹನ ಜಾಥಾ

ಸುದ್ದಿಕಿರಣ ವರದಿ
ಭಾನುವಾರ, ಆಗಸ್ಟ್ 14

ವಿಶ್ವ ಅಂಗದಾನ ಜಾಗೃತಿ ವಾಹನ ಜಾಥಾ
ಮಣಿಪಾಲ: ವಿಶ್ವ ಅಂಗದಾನ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ರೋಟರಿ ವಲಯ 4ರ ಆಶ್ರಯದಲ್ಲಿ ವಾಹನ ಜಾಥಾ ನಡೆಸಲಾಯಿತು.

ರೋಟರಿ ವಲಯ 4ರ ಹತ್ತು ಕ್ಲಬ್ ಗಳಾದ ಪೆರ್ಡೂರು, ಪರ್ಕಳ, ಐಸಿರಿ ಪರ್ಕಳ, ಮಣಿಪಾಲ ಟೌನ್, ಮಣಿಪಾಲ, ಮಣಿಪಾಲ ಹಿಲ್ಸ್, ಉಡುಪಿ, ಉಡುಪಿ ರೋಯಲ್, ಉದ್ಯಾವರ ಮತ್ತು ಕಟಪಾಡಿ ಸದಸ್ಯರು ತಂತಮ್ಮ ಪ್ರದೇಶದಿಂದ ಉಡುಪಿ ಜೋಡುಕಟ್ಟೆಗೆ ವಾಹನ ಜಾಥಾ ಮೂಲಕ ಸೇರಿ ಅಲ್ಲಿಂದ ಮಣಿಪಾಲ ಟೈಗರ್ ಸರ್ಕಲ್ ವರೆಗೆ ಅಂಗ ದಾನದ ಮಹತ್ವ ಮತ್ತು ಅಗತ್ಯತೆ ಬಗ್ಗೆ ಜನ ಜಾಗೃತಿಗಾಗಿ ನಡೆಸಿದ ಕಾರು ಮತ್ತು ಬೈಕ್ ಜಾಥಾವನ್ನು ಹೆಚ್ಚುವರಿ ಜಿಲ್ಲಾಧಿಕಾರಿ ವೀಣಾ ಬಿ. ಎನ್., ಮಾಹೆ ಪ್ರೊ.ಚಾನ್ಸಲರ್ ಡಾ. ಎಚ್. ಎಸ್. ಬಲ್ಲಾಳ್, ರೋಟರಿ ಗವರ್ನರ್ ಡಾ. ಜಯಗೌರಿ, ರೋಟರಿ ಸಹಾಯಕ ಗವರ್ನರ್ ರಾಮಚಂದ್ರ ಉಪಾಧ್ಯಾಯ ಮತ್ತು ರೋಟರಿ ಜಿಲ್ಲಾ ಯೋಜನೆಯಾದ ಚರ್ಮ ಮತ್ತು ಅಂಗದಾನ ಸಭಾಪತಿ ಡಾ. ಶ್ರೀಧರ ಮೊದಲಾದವರು ಚಾಲನೆ ನೀಡಿದರು.

ಎಡಿಸಿ ವೀಣಾ ಮಾತಾಡಿ, ಈ ಕ್ರಿಯೆಯಿಂದ ಅನೇಕರ ಜೀವ ಉಳಿಸುವ ಕಾರ್ಯವಾಗುತ್ತದೆ ಎಂದರು.

ಮಾಹೆ ಸಹಕುಲಾಧಿಪತಿ ಡಾ. ಬಲ್ಲಾಳ್, ಅಂಗದಾನದ ಆವಶ್ಯಕತೆ ಬಹಳಷ್ಟಿದ್ದು ಇಂಥ ಜಾಗೃತಿ ಕಾರ್ಯಕ್ರಮ ಬಹಳ ಅಗತ್ಯ ಎಂದರು.

ವಲಯದ ಕ್ಲಬ್ ಗಳ ಅಧ್ಯಕ್ಷರು ಮತ್ತು ಸದಸ್ಯರು, ಮಣಿಪಾಲ ಅಟೋ ಕ್ಲಬ್ ಮತ್ತು ಉಡುಪಿ ಜಾವಾ ಎಚ್.ಡಿ. ಮೋಟಾರ್ ಸೈಕಲ್ ಕ್ಲಬ್ ಸದಸ್ಯರು, ಉಡುಪಿ ಮತ್ತು ಮಣಿಪಾಲ ಪೊಲೀಸ್ ಠಾಣೆ ಮುಖ್ಯಸ್ಥರು ಮತ್ತು ಸಿಬಂದಿ ಜಾಥಾದಲ್ಲಿ ಭಾಗವಹಿಸಿದ್ದರು.

ಜಿಲ್ಲಾ ಕಾರ್ಯದರ್ಶಿ ಅಮಿತ ಅರವಿಂದ, ಸುಬ್ರಹ್ಮಣ್ಯ ಬಾಸ್ರಿ, ಡಾ. ಸೇಸಪ್ಪ ರೈ, ಪ್ರಶಾಂತ ಹೆಗ್ಡೆ ಮತ್ತು ರಾಜವರ್ಮ ಮೊದಲಾದವರಿದ್ದರು.

ಹೇಮಂತ ಯು. ಕಾಂತ ನಿರೂಪಿಸಿದರು. ಮಣಿಪಾಲ ಟೌನ್ ಅಧ್ಯಕ್ಷ ನಿತ್ಯಾನಂದ ನಾಯಕ್ ವಂದಿಸಿದರು

ನಿಮಗೆ ಈ ಸುದ್ದಿ ಇಷ್ಟವಾಯ್ತಾ?
ಹಾಗಾದರೆ ಇತರರಿಗೂ SHARE ಮಾಡಿ ಓದಿಸಿ...

ಕಾಮೆಂಟ್ ಮಾಡಿ

error: Content is protected !!