ಉಡುಪಿ: ಕಾಣಿಯೂರು ಶ್ರೀ ವಿದ್ಯಾವಲ್ಲಭತೀರ್ಥ ಶ್ರೀಪಾದರ ನೇತೃತ್ವದಲ್ಲಿ ಆಚಾರ್ಯ ಮಧ್ವರ ಜನ್ಮಭೂಮಿ ಪಾಜಕ ಕ್ಷೇತ್ರದಲ್ಲಿ ನಡೆಯುತ್ತಿರುವ ಸೌರ ಮಧ್ವನವರಾತ್ರೋತ್ಸವಲ್ಲಿ ಪಲಿಮಾರು ಶ್ರೀ ವಿದ್ಯಾಧೀಶತೀರ್ಥ ಶ್ರೀಪಾದರು ಭಾಗವಹಿಸಿದರು.
ಆಚಾರ್ಯ ಮಧ್ವರಿಗೆ ವಿಶೇಷ ಪೂಜೆ ನಡೆಸಿ, ಪ್ರವಚನ ನೆರವೇರಿಸಿದರು.
ಮಧ್ವನವರಾತ್ರೋತ್ಸವ ಪ್ರಯುಕ್ತ ನಡೆಯುತ್ತಿರುವ ಋಕ್ ಸಂಹಿತಾಯಾಗದ ಮೂರನೇ ದಿನದ ಪೂರ್ಣಾಹುತಿ ಕಾರ್ಯಕ್ರಮ ಪಲಿಮಾರು ಹಾಗೂ ಕಾಣಿಯೂರು ಶ್ರೀಪಾದರ ಸಾನ್ನಿಧ್ಯದಲ್ಲಿ ನೆರವೇರಿತು