Monday, July 4, 2022
Home ಸಮಾಚಾರ ಜಿಲ್ಲಾ ಸುದ್ದಿ ಪಣಿಯಾಡಿ ದೇವಳ ಜೀರ್ಣೋದ್ಧಾರ ಸಮಿತಿ ಕಚೇರಿ ಶುಭಾರಂಭ

ಪಣಿಯಾಡಿ ದೇವಳ ಜೀರ್ಣೋದ್ಧಾರ ಸಮಿತಿ ಕಚೇರಿ ಶುಭಾರಂಭ

ಉಡುಪಿ: ಜೀರ್ಣೋದ್ಧಾರಗೊಳ್ಳುತ್ತಿರುವ ಇಲ್ಲಿನ ಪಣಿಯಾಡಿ ಶ್ರೀ ಅನಂತಾಸನ ಶ್ರೀ ಲಕ್ಷ್ಮೀ ಅನಂತಪದ್ಮನಾಭ ದೇವಸ್ಥಾನದ ಜೀರ್ಣೋದ್ಧಾರ ಸಮಿತಿ ಕಚೇರಿ ಉದ್ಘಾಟನೆ ಭಾನುವಾರ ನಡೆಯಿತು.

ಜೀರ್ಣೋದ್ಧಾರ ಸಮಿತಿ ಗೌರವಾಧ್ಯಕ್ಷ ಪುತ್ತಿಗೆ ಶ್ರೀ ಸುಗುಣೇಂದ್ರತೀರ್ಥ ಶ್ರೀಪಾದರು ಜ್ಯೋತಿ ಬೆಳಗಿ ಉದ್ಘಾಟಿಸಿದರು.

ಸುಮಾರು 6 ಕೋ. ರೂ. ವೆಚ್ಚದಲ್ಲಿ ನಿರ್ಮಾಣಗೊಳ್ಳಲಿರುವ ನೂತನ ದೇವಸ್ಥಾನದ ನೀಲಿ ನಕಾಶೆಯನ್ನೂ ಇದೇ ಸಂದರ್ಭದಲ್ಲಿ ಅನಾವರಣಗೊಳಿಸಿದರು.

ಉಡುಪಿ ರಥಬೀದಿಯ ವಿಜಯ ಮೆಟಲ್ಸ್ ಸಂಸ್ಥೆ ವತಿಯಿಂದ ನೀಡಲಾದ ಜೀರ್ಣೋದ್ಧಾರ ನಿಧಿ ಹುಂಡಿಗೆ ಶ್ರೀಪಾದರು ಕಾಣಿಕೆ ಹಾಕುವ ಮೂಲಕ ಹುಂಡಿಗೆ ಚಾಲನೆ ನೀಡಲಾಯಿತು.

ಜಿಲ್ಲಾ ಧಾರ್ಮಿಕ ಪರಿಷತ್ ಸದಸ್ಯ ಸಾಣೂರು ಶ್ರೀರಾಮ ಭಟ್, ಮಣಿಪಾಲ ಪ್ರಸನ್ನ ಗಣಪತಿ ದೇವಳ ಆಡಳಿತ ಮೊಕ್ತೇಸರ ಬೆಳ್ಳಿಪ್ಪಾಡಿ ಹರಿಪ್ರಸಾದ್ ರೈ, ಕುಂಜಿತ್ತಾಯ ಶ್ರೀನಿವಾಸ ಉಪಾಧ್ಯ, ಕೊಡವೂರು ಸಾಯಿಬಾಬಾ ಮಂದಿರದ ಆಡಳಿತ ಸಮಿತಿ ಅಧ್ಯಕ್ಷ ತೋಟದಮನೆ ದಿವಾಕರ ಶೆಟ್ಟಿ, ಕೊಲ್ಲೂರು ದೇವಳ ಆಡಳಿತ ಮಂಡಳಿ ಸದಸ್ಯೆ ಸಂಧ್ಯಾ ರಮೇಶ್, ಪುತ್ತಿಗೆ ಮಠ ದಿವಾನ ನಾಗರಾಜ ಆಚಾರ್ಯ, ಕಾರ್ಯಾಧ್ಯಕ್ಷ ಎಸ್. ನಾರಾಯಣ ಮಡಿ ಇದ್ದರು.

ಜೀರ್ಣೋದ್ಧಾರ ಸಮಿತಿ ಪ್ರಧಾನ ಕಾರ್ಯದರ್ಶಿ ಬಿ. ವಿಜಯರಾಘವ ರಾವ್ ಸ್ವಾಗತಿಸಿ, ಸಮಿತಿ ಕಾರ್ಯಾಧ್ಯಕ್ಷ ಮಲ್ಪೆ ವಿಶ್ವನಾಥ ಭಟ್ ಪ್ರಸ್ತಾವಿಕವಾಗಿ ಮಾತನಾಡಿದರು. ರಾಜೇಶ್ ಭಟ್ ಪಣಿಯಾಡಿ ನಿರೂಪಿಸಿದರು. ಕೆ. ರಾಘವೇಂದ್ರ ಭಟ್ ವಂದಿಸಿದರು.

ಪುತ್ತಿಗೆ ಮಠದ ಆಡಳಿತಾಧಿಕಾರಿ ಪ್ರಸನ್ನಾಚಾರ್, ಪುತ್ತಿಗೆ ಮಠದ ಶ್ರೀ ವಾದಿರಾಜ ಸಂಶೋಧನ ಸಂಸ್ಥೆ ನಿರ್ದೇಶಕ ಗೋಪಾಲಾಚಾರ್ ಇದ್ದರು.

ದೇವಸ್ಥಾನದ ಕಲ್ಲಿನ ಕೆತ್ತನೆ ಕೆಲಸವನ್ನು ಶಿಲ್ಪಿ ರಾಜು ನಾಯಕ್ ನಡೆಸುತ್ತಿದ್ದಾರೆ. ಕಾಮಗಾರಿ ಉಸ್ತುವಾರಿಯನ್ನು ಉಡುಪಿಯ ನಿಧಿ ಕನ್ಸ್ಟ್ರಕ್ಷನ್ ಮಾಲಿಕ ಸಂತೋಷ್ ಪಿ. ಶೆಟ್ಟಿ ತೆಂಕರಗುತ್ತು ವಹಿಸಿಕೊಂಡಿದ್ದಾರೆ.

 

 

ನಿಮಗೆ ಈ ಸುದ್ದಿ ಇಷ್ಟವಾಯ್ತಾ?
ಹಾಗಾದರೆ ಇತರರಿಗೂ SHARE ಮಾಡಿ ಓದಿಸಿ...

ಕಾಮೆಂಟ್ ಮಾಡಿ

error: Content is protected !!