Monday, July 4, 2022
Home ಸಮಾಚಾರ ರಾಜ್ಯ ವಾರ್ತೆ ಪರ್ತಗಾಳಿ ಮಠಾಧೀಶರ ಪೀಠಾರೋಹಣ

ಪರ್ತಗಾಳಿ ಮಠಾಧೀಶರ ಪೀಠಾರೋಹಣ

ಪಣಜಿ: ಗೌಡ ಸಾರಸ್ವತ ಬ್ರಾಹ್ಮಣರ ಮಠಗಳಲ್ಲೊಂದಾದ ಗೋಕರ್ಣ ಪರ್ತಗಾಳಿ ಜೀವೋತ್ತಮ ಮಠದ 24ನೆಯ ಪೀಠಾಧಿಪತಿಯಾಗಿ  ಶ್ರೀ ವಿದ್ಯಾಧೀಶ ತೀರ್ಥ ಶ್ರೀಪಾದ ವಡೇರ ಸ್ವಾಮೀಜಿ ಶುಕ್ರವಾರ ಪೀಠಾರೋಹಣ ಮಾಡಿದರು.

ಇಲ್ಲಿನ ಕಾಣಕೋಣದಲ್ಲಿರುವ  ಶ್ರೀ ಪರ್ತಗಾಳಿ ಜೀವೋತ್ತಮ ಮಠದಲ್ಲಿ  ಇಂದು ಅಪರಾಹ್ನ ೩.೧೦ಕ್ಕೆ ನಡೆದ ಸರಳ ಸಮಾರಂಭದಲ್ಲಿ ನೂತನ ಯತಿಯ ಪೀಠಾರೋಹಣ ವಿಧಿ ವಿಧಾನ ನಡೆಯಿತು.

ಕಾರ್ಯಕ್ರಮದಲ್ಲಿ ಮಠ ಸಮಿತಿ ಅಧ್ಯಕ್ಷರು, ಪದಾಧಿಕಾರಿಗಳ ಸಹಿತ ಸೀಮಿತ ಸಂಖ್ಯೆಯ ಭಕ್ತಾದಿಗಳಿಗೆ ಅವಕಾಶ ನೀಡಲಾಗಿತ್ತು.

ಕೋವಿಡ್ ಹಿನ್ನೆಲೆಯಲ್ಲಿ ಪೀಠಾರೋಹಣವನ್ನು ಸರಳವಾಗಿ ಆಚರಿಸಲಾಯಿತು.

ನಂತರ ಶ್ರೀಮಠದ ಶಾಖಾ ಮಠಗಳ ಸಮಿತಿಯಿಂದ ಪೀಠಾರೂಢ ಗುರುಗಳಿಗೆ ಪಟ್ಟಕಾಣಿಕೆ ಸಮರ್ಪಿಸಿ,  ಗೌರವ ಸಲ್ಲಿಸಲಾಯಿತು.

ನಿಮಗೆ ಈ ಸುದ್ದಿ ಇಷ್ಟವಾಯ್ತಾ?
ಹಾಗಾದರೆ ಇತರರಿಗೂ SHARE ಮಾಡಿ ಓದಿಸಿ...

ಕಾಮೆಂಟ್ ಮಾಡಿ

error: Content is protected !!