Tuesday, May 17, 2022
Home ಸಮಾಚಾರ ರಾಷ್ಟ್ರೀಯ ವಾರ್ತೆ ಯೋಗಿ ಪ್ರಮಾಣವಚನ ಕಾರ್ಯಕ್ರಮದಲ್ಲಿ ಪೇಜಾವರಶ್ರೀ ಭಾಗಿ

ಯೋಗಿ ಪ್ರಮಾಣವಚನ ಕಾರ್ಯಕ್ರಮದಲ್ಲಿ ಪೇಜಾವರಶ್ರೀ ಭಾಗಿ

ಸುದ್ದಿಕಿರಣ ವರದಿ
ಶುಕ್ರವಾರ, ಮಾರ್ಚ್ 25

ಯೋಗಿ ಪ್ರಮಾಣವಚನ ಕಾರ್ಯಕ್ರಮದಲ್ಲಿ ಪೇಜಾವರಶ್ರೀ ಭಾಗಿ
ಲಕ್ನೋ: ಇಲ್ಲಿನ ಅಟಲ್ ಬಿಹಾರಿ ವಾಜಪೇಯಿ ಸ್ಟೇಡಿಯಮ್ ನಲ್ಲಿ ಶುಕ್ರವಾರ ನಡೆದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಪ್ರಮಾಣ ವಚನ ಸ್ವೀಕಾರದ ಬೃಹತ್ ಸಮಾರಂಭದಲ್ಲಿ ಉಡುಪಿ ಪೇಜಾವರ ಮಠಾಧೀಶ ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಪಾದರು ಭಾಗವಹಿಸಿದ್ದರು.

ಕರ್ನಾಟಕದಿಂದ ಆದಿಚುಂಚನಗಿರಿ ಮಠದ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ, ಇಸ್ಕಾನ್ ನ ಮಧುಪಂಡಿತದಾಸ್ ಕೂಡಾ ಆಗಮಿಸಿದ್ದರು.

ಶ್ರೀಗಳ ಜೊತೆ ಬೆಂಗಳೂರಿನ ಉದ್ಯಮಿ ರಾಮಪ್ರಸಾದ್, ವಾಸುದೇವ ಭಟ್ ಪೆರಂಪಳ್ಳಿ, ದೆಹಲಿ ಪೇಜಾವರ ಮಠದ ಮ್ಯಾನೇಜರ್ ದೇವಿಪ್ರಸಾದ್ ಭಟ್, ಕೃಷ್ಣ ಭಟ್ ಇದ್ದರು.

ಅನೇಕ ರಾಜ್ಯಗಳಿಂದ ನೂರಾರು ಸಾಧು ಸಂತರನ್ನು ಆಮಂತ್ರಿಸಲಾಗಿದ್ದು ಅವರ ಆತಿಥ್ಯಕ್ಕಾಗಿ ಹಿರಿಯ ಅಧಿಕಾರಿಗಳಾದ ಅವನೀಶ್ ಅವಸ್ಥಿ, ಆರ್. ಪಿ. ಸಿಂಗ್, ಅಶೋಕ್ ತಿವಾರಿ, ಆರ್.ಬಿ. ಎಸ್ ರಾವತ್ ಮೊದಲಾದವರ ನೇತೃತ್ವದ ಪ್ರತ್ಯೇಕ ತಂಡ ರಚಿಸಲಾಗಿತ್ತು.

ಆದಿತ್ಯನಾಥ ಯೋಗಿ ಮತ್ತೆ ಅಧಿಕಾರ ಸ್ವೀಕರಿಸುತ್ತಿರುವುದನ್ನು ಉತ್ತರ ಪ್ರದೇಶದ ಜನ ಸಂಭ್ರಮಿಸುತ್ತಿರುವುದು ಎಲ್ಲೆಲ್ಲೂ ಕಂಡುಬಂದಿದ್ದು ರಸ್ತೆ ಇಕ್ಕೆಲಗಳು, ವಿಮಾನ ನಿಲ್ದಾಣ, ಬಸ್ ನಿಲ್ದಾಣ ಗಳಲ್ಲಿ ನೂರಾರು ನೃತ್ಯ ತಂಡಗಳ ನೃತ್ಯ ಪ್ರದರ್ಶನ, ಬ್ಯಾಂಡ್ ಇತ್ಯಾದಿ ನುಡಿಸುತ್ತಾ ಸಂಭ್ರಮಿಸುತ್ತಿದ್ದರು

ನಿಮಗೆ ಈ ಸುದ್ದಿ ಇಷ್ಟವಾಯ್ತಾ?
ಹಾಗಾದರೆ ಇತರರಿಗೂ SHARE ಮಾಡಿ ಓದಿಸಿ...

ಕಾಮೆಂಟ್ ಮಾಡಿ

error: Content is protected !!