Thursday, July 7, 2022
Home ಸಮಾಚಾರ ಜಿಲ್ಲಾ ಸುದ್ದಿ ಉತ್ತರಾಖಂಡ್ ಹಿಮಪಾತ: ಪೇಜಾವರಶ್ರೀ ಕಳವಳ

ಉತ್ತರಾಖಂಡ್ ಹಿಮಪಾತ: ಪೇಜಾವರಶ್ರೀ ಕಳವಳ

ಉಡುಪಿ: ಉತ್ತರಾಖಂಡ್ ನಲ್ಲಿ ಭಾನುವಾರ ಭೀಕರ ಹಿಮಪಾತ ಸಂಭವಿಸಿ, ಕೆಲವರು ಮೃತಪಟ್ಟು ಹಲವಾರು ಮಂದಿ ಕೊಚ್ಚಿಹೋಗಿ ಕಣ್ಮರೆಯಾಗಿರುವ ಬಗ್ಗೆ ಪೇಜಾವರ ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಪಾದರು ತೀವ್ರ ಕಳವಳ ವ್ಯಕ್ತಪಡಿಸಿದ್ದಾರೆ.

ಈ ಪ್ರಾಕೃತಿಕ ದುರ್ಘಟನೆಯಿಂದ ತೀವ್ರ ಬೇಸರವಾಗಿದೆ. ಅದರಿಂದ ಸಂತ್ರಸ್ತರಾಗಿರುವವರ ನೋವಿಗೆ ನಮ್ಮ ಸಹಾನುಭೂತಿ ಇದೆ. ಉತ್ತರಾಖಂಡ್ ರಾಜ್ಯದ ಸಮಸ್ತ ಜನತೆಯ ಶ್ರೇಯಸ್ಸಿಗಾಗಿ ಭಗವಂತನಲ್ಲಿ ಪ್ರಾರ್ಥಿಸುತ್ತೇವೆ.

ಘಟನೆಯಿಂದ ಮೃತರಾಗಿರುವವರಿಗೆ ದೇವರು ಸದ್ಗತಿ ಕರುಣಿಸಲಿ. ನಾಪತ್ತೆಯಾಗಿರುವವರು ಯಾವುದೇ ಅಪಾಯವಿಲ್ಲದೆ ಶೀಘ್ರ ಪತ್ತೆಯಾಗಲಿ ಎಂದು ಆಶಿಸುವುದಾಗಿ ಅವರು ತಿಳಿಸಿದ್ದಾರೆ

ನಿಮಗೆ ಈ ಸುದ್ದಿ ಇಷ್ಟವಾಯ್ತಾ?
ಹಾಗಾದರೆ ಇತರರಿಗೂ SHARE ಮಾಡಿ ಓದಿಸಿ...

ಕಾಮೆಂಟ್ ಮಾಡಿ

error: Content is protected !!