ಉಡುಪಿ: ಪೇಜಾವರ ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಪಾದರು ಕಾಂಚಿ ಮಠಕ್ಕೆ ಭೇಟಿ ನೀಡಿ ಶ್ರೀ ವಿಜಯೇಂದ್ರ ಸರಸ್ವತೀ ಸ್ವಾಮೀಜಿಯವರನ್ನು ಭೇಟಿ ಮಾಡಿದರು. ಶ್ರೀಗಳನ್ನು ಸಾಂಪ್ರದಾಯಿಕ ಗೌರವದೊಂದಿಗೆ ಆತ್ಮೀಯವಾಗಿ ಮಾಡಿಕೊಂಡರು.
ಶ್ರೀಗಳ ಭೇಟಿಗೆ ಅತೀವ ಸಂತಸ ವ್ಯಕ್ತಪಡಿಸಿ, ಉಡುಪಿ ಹಾಗೂ ಕಾಂಚಿ ಮಠಗಳೊಂದಿಗಿನ ಸಂಬಂಧ ಅದರಲ್ಲೂ ವಿಶೇಷವಾಗಿ ಉಭಯ ಮಠಗಳ ಹಿಂದಿನ ಗುರುಗಳಾದ ಶ್ರೀ ವಿಶ್ವೇಶತೀರ್ಥ ಶ್ರೀಪಾದರು ಮತ್ತು ಶ್ರೀ ಜಯೇಂದ್ರ ಸರಸ್ವತೀ ಸ್ವಾಮೀಜಿಯವರ ಬಾಂಧವ್ಯ ಸ್ಮರಿಸಿದರು.
ಅಯೋಧ್ಯೆ ರಾಮಮಂದಿರ ನಿರ್ಮಾಣ ಬಗ್ಗೆ ಉಭಯರೂ ಸಮಾಲೋಚನೆ ನಡೆಸಿ, ಮುಂದೆ ನಡೆಯಲಿರುವ ಧನಸಂಗ್ರಹ ಅಭಿಯಾನ ಮತ್ತು ಇತರ ಕಾರ್ಯಗಳಲ್ಲಿ ವಿಶೇಷ ಸಹಕಾರ ಕೊಡಬೇಕೆಂದು ಪೇಜಾವರ ಶ್ರೀಗಳು ವಿಶೇಷ ಮನವಿ ಮಾಡಿದರು.
ಕಾಂಚಿ ಮಠದ ಪರವಾಗಿ ಪೇಜಾವರ ಶ್ರೀಗಳನ್ನು ಸಂಮಾನಿಸಿ ಅಭಿನಂದಿಸಿದರು. ಪೇಜಾವರ ಶ್ರೀಗಳೂ ಕಾಂಚಿ ಶ್ರೀಗಳನ್ನು ಗೌರವಿಸಿದರು.
ಅದಕ್ಕೂ ಮೊದಲು ಪೇಜಾವರ ಶ್ರೀಗಳು ತಮ್ಮ ಶಿಷ್ಯದೊಂದಿಗೆ ವರದರಾಜಸ್ವಾಮಿ, ಕಾಮಾಕ್ಷಿ ದೇವಿಯ ದರ್ಶನ ಪಡೆದು ಲೋಕಕ್ಷೇಮಕ್ಕಾಗಿ ಮತ್ತು ಶ್ರೀರಾಮ ಮಂದಿರ ನಿರ್ಮಾಣ ಕಾರ್ಯ ನಿವರ್ಿಘ್ನವಾಗಿ ನಡೆಯುವಂತೆ ಪ್ರಾರ್ಥಿಸಿದರು.
ಕಾಂಚಿಯಲ್ಲಿರುವ ವ್ಯಾಸರಾಜ ಮಠದ ಶಾಖೆಗೂ ಭೇಟಿ ನೀಡಿದ ಬಳಿಕ ಉತ್ತರಾದಿ ಮಠದ ಶಾಖೆಯಲ್ಲಿ ಪಟ್ಟದದೇವರ ರಾತ್ರಿ ಪೂಜೆ ನೆರವೇರಿಸಿದರು.
ಉತ್ತರಾದಿ ಮಠ ಶಾಖಾ ವ್ಯವಸ್ಥಾಪಕ ಪ್ರದೀಪ ಆಚಾರ್ಯ ಸಹಕರಿಸಿದರು