Monday, August 15, 2022
Home ಸಮಾಚಾರ ರಾಜ್ಯ ವಾರ್ತೆ ಕಡಲ್ಕೊರೆತಕ್ಕೆ ದೀರ್ಘಕಾಲಿಕ ಯೋಜನೆ

ಕಡಲ್ಕೊರೆತಕ್ಕೆ ದೀರ್ಘಕಾಲಿಕ ಯೋಜನೆ

ಸುದ್ದಿಕಿರಣ ವರದಿ
ಮಂಗಳವಾರ, ಜುಲೈ 12

ಕಡಲ್ಕೊರೆತಕ್ಕೆ ದೀರ್ಘಕಾಲಿಕ ಯೋಜನೆ
ಮಂಗಳೂರು: ಕೇಂದ್ರ ಸರ್ಕಾರದ ನೆರವಿನೊಂದಿಗೆ ಕಡಲ್ಕೊರೆತ ಸಮಸ್ಯೆಯ ಶಾಶ್ವತ ಪರಿಹಾರಕ್ಕೆ ದೀರ್ಘಕಾಲಿಕ ಯೋಜನೆಯನ್ನು ರಾಜ್ಯ ಸರ್ಕಾರ ರೂಪಿಸಲಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.

ಮಂಗಳವಾರ ಉಳ್ಳಾಲ ಕಡಲ್ಕೊರೆತ ಪ್ರದೇಶಗಳಿಗೆ ಭೇಟಿ ನೀಡಿ, ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು.

ದಕ್ಷಿಣ ಕನ್ನಡ, ಉಡುಪಿ ಮತ್ತು ಉತ್ತರ ಕನ್ನಡ ಜಿಲ್ಲೆಗಳಲ್ಲಿ ನಿರಂತರವಾಗಿ ಕಡಲ್ಕೊರೆತ ಆಗುತ್ತಿರುತ್ತದೆ. ಉಳ್ಳಾಲದಲ್ಲಿ ಕಳೆದ ಬಾರಿ ಸುಮಾರು 800 ಮೀ. ಕಡಲ್ಕೊರೆತ ಆಗಿತ್ತು. ಈ ಬಾರಿ 600 ಮೀ. ಆಗಿದೆ. ಹಾಗಾಗಿ ಕಡಲ್ಕೊರೆತ ಸಮಸ್ಯೆಯ ಶಾಶ್ವತ ಪರಿಹಾರ ನೀಡುವುದು ಅತ್ಯಂತ ಅವಶ್ಯಕ ಎಂದರು.

ಸಮುದ್ರದ ಅಲೆಗಳನ್ನು ತೆಡೆಯುವ ನಿಟ್ಟಿನಲ್ಲಿ ಸೀ ವೇವ್ ಬ್ರೇಕರ್ ಟೆಕ್ನಾಲಜಿಯನ್ನು ಇಲ್ಲಿ ಬಳಕೆ ಮಾಡಲು ತೀರ್ಮಾನ ಮಾಡಲಾಗಿದೆ. ಕಡಲ್ಕೊರೆತ ಸಮಸ್ಯೆ ಶಾಶ್ವತ ಪರಿಹಾರಕ್ಕೆ ಹಿರಿಯ ಅಧಿಕಾರಿಗಳೊಂದಿಗೆ ಚರ್ಚಿಸುವುದಾಗಿ ತಿಳಿಸಿದರು.

ಸಚಿವರಾದ ಎಸ್. ಅಂಗಾರ, ವಿ. ಸುನಿಲ್ ಕುಮಾರ್ ಮತ್ತು ಕೋಟ ಶ್ರೀನಿವಾಸ ಪೂಜಾರಿ, ಶಾಸಕ ಯು. ಟಿ. ಖಾದರ್, ಜಿಲ್ಲಾಧಿಕಾರಿ ಡಾ| ಕೆ. ವಿ. ರಾಜೇಂದ್ರ, ಜಿ. ಪಂ. ಸಿಇಓ ಡಾ| ಕುಮಾರ್ ಮೊದಲಾದವರಿದ್ದರು.

ನಿಮಗೆ ಈ ಸುದ್ದಿ ಇಷ್ಟವಾಯ್ತಾ?
ಹಾಗಾದರೆ ಇತರರಿಗೂ SHARE ಮಾಡಿ ಓದಿಸಿ...

ಕಾಮೆಂಟ್ ಮಾಡಿ

error: Content is protected !!