Monday, July 4, 2022
Home ಸಮಾಚಾರ ಜಿಲ್ಲಾ ಸುದ್ದಿ 10 ಸಾವಿರ ಗಿಡ ನೆಡುವ ಯೋಜನೆಗೆ ಚಾಲನೆ

10 ಸಾವಿರ ಗಿಡ ನೆಡುವ ಯೋಜನೆಗೆ ಚಾಲನೆ

ಬ್ರಹ್ಮಾವರ, ಜು. 11 (ಸುದ್ದಿಕಿರಣ ವರದಿ): ಇಲ್ಲಿನ ಬ್ರಹ್ಮಾವರ- ಸೀತಾನದಿ ಮುಖ್ಯರಸ್ತೆಯನ್ನು ಅಗಲಗೊಳಿಸಲಾಗಿದ್ದು, ಈ ಸಂದರ್ಭದಲ್ಲಿ ರಸ್ತೆ ಬದಿಯ ಒಟ್ಟು 1,014 ಬೃಹತ್ ಮರಗಳನ್ನು ತೆರವು ಮಾಡಲಾಗಿತ್ತು. ಅತಿ ಹೆಚ್ಚು ವಾಹನ ಸಂಚಾರದ ಈ ರಸ್ತೆಯನ್ನು ಅಗಲಗೊಳಿಸುವುದು ಅತ್ಯಾವಶ್ಯಕವಾಗಿದ್ದು, ಅಭಿವೃದ್ಧಿ ಜೊತೆಗೆ ಪರಿಸರ ಸಮತೋಲನದ ಕಾಳಜಿ ಹಿನ್ನೆಲೆಯಲ್ಲಿ ಶಾಸಕ ರಘುಪತಿ ಭಟ್ ಈ ಭಾಗದಲ್ಲಿ 10 ಸಾವಿರ ಗಿಡ ನೆಡುವ ಯೋಜನೆ ರೂಪಿಸಿದ್ದು, ಭಾನುವಾರ ಅರಣ್ಯ ಇಲಾಖೆ ಸಚಿವ ಅರವಿಂದ ಲಿಂಬಾವಳಿ ಗಿಡ ನೆಡುವ ಮೂಲಕ ಚಾಲನೆ ನೀಡಿದರು.

ಬ್ರಹ್ಮಾವರ ಕೃಷಿ ಕೇಂದ್ರದ ಎದುರಿನಿಂದ ಪ್ರಾರಂಭಿಸಿ ರಸ್ತೆಯ ಎರಡೂ ಬದಿಗಳಲ್ಲಿ ಸುಮಾರು 3 ಸಾವಿರ ವಿವಿಧ ಜಾತಿಯ ಹಣ್ಣು ಮತ್ತು ಹೂವಿನ ಗಿಡ ಹಾಗೂ ಸುತ್ತಮುತ್ತಲಿನ ಅರಣ್ಯದ ಸರ್ಕಾರಿ, ಖಾಸಗಿ ಮತ್ತು ಆಸುಪಾಸಿನ ಜಾಗದಲ್ಲಿ 7 ಸಾವಿರ ಗಿಡ ನೆಡುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.

ಈ ಸಂದರ್ಭದಲ್ಲಿ ಕಾರ್ಕಳ ಶಾಸಕ ವಿ. ಸುನಿಲ್ ಕುಮಾರ್, ಚಾಂತಾರು ಗ್ರಾ. ಪಂ. ಅಧ್ಯಕ್ಷೆ ಮೀರಾ ಸದಾನಂದ ಪೂಜಾರಿ, ಉಪಾಧ್ಯಕ್ಷೆ ಲಕ್ಷ್ಮೀ ಹಾಗೂ ಅರಣ್ಯ ಇಲಾಖೆ ಅಧಿಕಾರಿಗಳಾದ ಮಿಲ್ಲೋ ಟ್ಯಾಗೋ, ಪ್ರಕಾಶ ಎಸ್. ನೆಟಾಲ್ಕರ್ ಮತ್ತು ಆಶಿಶ್ ರೆಡ್ಡಿ ಮೊದಲಾದವರಿದ್ದರು

ನಿಮಗೆ ಈ ಸುದ್ದಿ ಇಷ್ಟವಾಯ್ತಾ?
ಹಾಗಾದರೆ ಇತರರಿಗೂ SHARE ಮಾಡಿ ಓದಿಸಿ...

ಕಾಮೆಂಟ್ ಮಾಡಿ

error: Content is protected !!