Monday, July 4, 2022
Home ಸಮಾಚಾರ ಜಿಲ್ಲಾ ಸುದ್ದಿ ಶಿರ್ವ ಕಾಲೇಜಿನಲ್ಲಿ ವನಮಹೋತ್ಸವ

ಶಿರ್ವ ಕಾಲೇಜಿನಲ್ಲಿ ವನಮಹೋತ್ಸವ

ಶಿರ್ವ: ಇಲ್ಲಿನ ಸಂತ ಮೇರಿ ಮಹಾವಿದ್ಯಾಲಯದ ವಿವಿಧ ಘಟಕಗಳಾದ ಗ್ರೀನ್ ಟೀಚರ್ ಫೋರಂ, ಎನ್.ಸಿಸಿ, ಎನ್.ಎಸ್.ಎಸ್, ಯೂತ್ ರೆಡ್ ಕ್ರಾಸ್ ಮತ್ತು ರೋವರ್ಸ್ ರೇಂಜರ್ಸ್ ಸಂಯುಕ್ತಾಶ್ರಯದಲ್ಲಿ ಗುರುವಾರ ಹಸಿರಿನಿಂದ ಉಸಿರು ವನಮಹೋತ್ಸವ ಕಾರ್ಯಕ್ರಮ ಕಾಲೇಜು ಆವರಣದಲ್ಲಿ ನಡೆಯಿತು.

ಫಲ ನೀಡುವ ಗಿಡ ನೆಡುವ ಮೂಲಕ ಸಂತ ಮೇರಿ ಸಮೂಹ ಸಂಸ್ಥೆಗಳ ಸಂಚಾಲಕ ವಂ| ಡೆನ್ನಿಸ್ ಅಲೆಕ್ಸಾಂಡರ್ ಡೇಸ ಚಾಲನೆ ನೀಡಿದರು.

ಕಾಲೇಜು ಪ್ರಾಂಶುಪಾಲ ಡಾ| ಹೆರಾಲ್ಡ್ ಐವನ್ ಮೋನಿಸ್, ಪರಿಸರ ಸಂರಕ್ಷಣೆ ನಮ್ಮೆಲ್ಲರ ಹೊಣೆ. ಎಲ್ಲರೂ ನಮ್ಮ ಈ ಕರ್ತವ್ಯ ಪಾಲನೆ ಮಾಡೋಣ ಎಂದರು.

ಇದೇ ಸಂದರ್ಭದಲ್ಲಿ ಎಲ್ಲಾ ಶಿಕ್ಷಕ, ಶಿಕ್ಷಕೇತರ ಸಿಬ್ಬಂದಿ ವರ್ಗದವರಿಗೆ ಪರಿಸರ ಕಾಳಜಿ ಮತ್ತು ಅದರ ಪ್ರಾಮುಖ್ಯತೆ ತಿಳಿಸುವ ಪ್ರತಿಜ್ಞಾ ಸ್ವೀಕಾರ ನಡೆಸಿಕೊಟ್ಟರು.

ಕಾಲೇಜಿನ ವಿದ್ಯಾರ್ಥಿ ಕ್ಷೇಮಾಮಾಭಿವೃದ್ಧಿ ನಿರ್ದೇಶಕಿ ಮತ್ತು ಗ್ರೀನ್ ಟೀಚರ್ ಫೋರಂ ಸಂಯೋಜಕಿ ಯಶೋದಾ ಕಾರ್ಯಕ್ರಮದ ಆಶಯ ವಿವರಿಸಿ, ಸ್ವಾಗತಿಸಿದರು.

ಕಾಲೇಜಿನ ಎನ್.ಸಿ.ಸಿ ಅಧಿಕಾರಿ ಲೆಫ್ಟಿನೆಂಟ್ ಕೆ. ಪ್ರವೀಣ್ ಕುಮಾರ್, ಎನ್.ಎಸ್.ಎಸ್ ಅಧಿಕಾರಿ ರಕ್ಷಾ, ರೇಂಜರ್ಸ್ ಲೀಡರ್ ಸಂಗೀತ ಪೂಜಾರಿ, ರೆಡ್ ಕ್ರಾಸ್ ಘಟಕದ ಮುರಳಿ, ಅಧ್ಯಾಪಕ ಮತ್ತು ಅಧ್ಯಾಪಕೇತರ ಸಿಬಂದಿ ಇದ್ದರು.

ಎನ್.ಎಸ್.ಎಸ್ ಅಧಿಕಾರಿ ಪ್ರೇಮನಾಥ ವಂದಿಸಿ, ರೋವರ್ಸ್ ಸ್ಕೌಟ್ ಲೀಡರ್ ಪ್ರಕಾಶ್ ನಿರೂಪಿಸಿದರು

ನಿಮಗೆ ಈ ಸುದ್ದಿ ಇಷ್ಟವಾಯ್ತಾ?
ಹಾಗಾದರೆ ಇತರರಿಗೂ SHARE ಮಾಡಿ ಓದಿಸಿ...

ಕಾಮೆಂಟ್ ಮಾಡಿ

error: Content is protected !!