Thursday, July 7, 2022
Home ಸಮಾಚಾರ ರಾಷ್ಟ್ರೀಯ ವಾರ್ತೆ ಪಿವಿಎನ್ ಕೊಡುಗೆ ಸ್ಮರಿಸಿದ ಪ್ರಧಾನಿ

ಪಿವಿಎನ್ ಕೊಡುಗೆ ಸ್ಮರಿಸಿದ ಪ್ರಧಾನಿ

ನವದೆಹಲಿ: ಮಾಜಿ ಪ್ರಧಾನಿ ಪಿ. ವಿ. ನರಸಿಂಹರಾವ್ ಅವರ 100ನೇ ಜನ್ಮದಿನ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಸೋಮವಾರ ಟ್ವೀಟ್ ಮೂಲಕ ಶುಭ ಹಾರೈಸಿದ್ದಾರೆ.

ಪಿ. ವಿ. ನರಸಿಂಹ ರಾವ್ ಅವರಿಗೆ ಗೌರವ ನಮನ ಸಲ್ಲಿಸಿರುವ ಮೋದಿ, ರಾಷ್ಟ್ರದ ಪ್ರಗತಿಗೆ ಅವರು ನೀಡಿದ ಕೊಡುಗೆಯನ್ನು ಭಾರತ ಎಂದಿಗೂ ಸ್ಮರಿಸುತ್ತದೆ. ಅವರು ದೇಶಕ್ಕೆ ಅಪಾರ ಜ್ಞಾನ ಮತ್ತು ಚಿಂತನಶೀಲತೆ ಕರುಣಿಸಿದ್ದಾರೆ ಎಂದು ಬಣ್ಣಿಸಿದ್ದಾರೆ.

ಟ್ವೀಟ್ ನೊಂದಿಗೆ ಕಳೆದ ಜೂನ್ ತಿಂಗಳ ಮನ್ ಕಿ ಬಾತ್ ಕಾರ್ಯಕ್ರಮದಲ್ಲಿ ಪಿ. ವಿ. ನರಸಿಂಹರಾವ್ ಕುರಿತು ಮಾತನಾಡಿದ್ದ ವಿಡಿಯೊವನ್ನೂ ಮೋದಿ ಹಂಚಿಕೊಂಡಿದ್ದಾರೆ

ನಿಮಗೆ ಈ ಸುದ್ದಿ ಇಷ್ಟವಾಯ್ತಾ?
ಹಾಗಾದರೆ ಇತರರಿಗೂ SHARE ಮಾಡಿ ಓದಿಸಿ...

ಕಾಮೆಂಟ್ ಮಾಡಿ

error: Content is protected !!