Saturday, July 2, 2022
Home ಸಮಾಚಾರ ಜಿಲ್ಲಾ ಸುದ್ದಿ ಇಗರ್ಜಿಗಳಲ್ಲಿ ಪೂಜೆಯೊಂದಿಗೆ ಹೊಸ ವರ್ಷಕ್ಕೆ ಸ್ವಾಗತ

ಇಗರ್ಜಿಗಳಲ್ಲಿ ಪೂಜೆಯೊಂದಿಗೆ ಹೊಸ ವರ್ಷಕ್ಕೆ ಸ್ವಾಗತ

ಉಡುಪಿ: ನೂತನ ವರ್ಷ 2021ನ್ನು ಜಿಲ್ಲೆಯ ಕ್ರೈಸ್ತ ಬಾಂಧವರು ಪ್ರಾರ್ಥನೆ ಹಾಗೂ ಧನ್ಯವಾದ ಸಮರ್ಪಣೆ ಮೂಲಕ ಸ್ವಾಗತಿಸಿದರು.

ಗುರುವಾರ ಸಂಜೆ ವೇಳೆ ಚರ್ಚುಗಳಿಗೆ ತೆರಳಿ, ಕಳೆದ ವರ್ಷ ಸರ್ವ ರೀತಿಯಲ್ಲಿ ತಮ್ಮನ್ನು ಕಾಪಾಡಿದ್ದಕ್ಕಾಗಿ ದೇವರಿಗೆ ಕೃತಜ್ಞತೆ ಸಲ್ಲಿಸಿದರು. ನೂತನ ವರ್ಷ ಪ್ರತಿಯೊಬ್ಬರಿಗೂ ಸಂತೋಷ ತರಲಿ ಎಂದು ಪ್ರಾರ್ಥಿಸಿದರು.

ಉಡುಪಿ ಬಿಷಪ್ ವಂ. ಡಾ| ಜೆರಾಲ್ಡ್ ಐಸಾಕ್ ಲೋಬೊ ತಮ್ಮ ಅಧಿಕೃತ ಮಿಲಾಗ್ರಿಸ್ ಕ್ಯಾಥೆಡ್ರಲ್ ನಲ್ಲಿ ಗುರುವಾರ ರಾತ್ರಿ ಪವಿತ್ರ ಬಲಿಪೂಜೆ ಸಲ್ಲಿಸಿದರು. ಕ್ರೈಸ್ತ ಮಹಾಗುರು ಪೋಪ್ ಫ್ರಾನ್ಸಿಸ್ ಆಶಯದ ವಿಶ್ವ ಭ್ರಾತೃತ್ವದ ಸಂದೇಶ ನೀಡಿ, ವೈಯಕ್ತಿಕ ಬದುಕಿನೊಂದಿಗೆ ಸಹೋದರತ್ವ ಹಾಗೂ ಸಾಮಾಜಿಕ ಗೆಳೆತನ, ಮಾನವರು ಪರಸ್ಪರ ಒಪ್ಪಿಕೊಳ್ಳಬೇಕಾದ ಮೌಲ್ಯಗಳು. ನಾವೆಲ್ಲ ಪರಸ್ಪರ ಒಪ್ಪಿಕೊಂಡು ಪ್ರಶಂಸಿಸಿ, ಪ್ರೀತಿಸುವ ಮುಕ್ತ ಮನೋಭಾವವುಳ್ಳವರಾಗಿರಬೇಕು. ಪೃಕೃತಿಯ ಪ್ರತೀ ವಸ್ತು ಹಾಗೂ ಜೀವಿಯಲ್ಲೂ ಸೋದರತೆಯನ್ನು ಕಾಣಬೇಕು ಎಂದು ಹಾರೈಸಿದರು.

2021ರಲ್ಲಿ ವಿಶ್ವದಲ್ಲಿ ಶಾಂತಿ ನೆಲೆಸಲಿ. ಕೊರೊನಾದಿಂದ ವಿಶ್ವಕ್ಕೆ ಮುಕ್ತಿ ಸಿಗುವಂತಾಗಲಿ ಎಂದು ಪ್ರಾರ್ಥಿಸಲಾಯಿತು

ಕೋವಿಡ್ ನಿಯಮಾವಳಿಯಂತೆ ಎಲ್ಲಾ ಚರ್ಚುಗಳಲ್ಲಿ ವ್ಯಕ್ತಿಗತ ಅಂತರ ಕಾಯ್ದುಕೊಂಡು, ಥರ್ಮಲ್ ಸ್ಕ್ರೀನಿಂಗ್ ಮತ್ತು ಸ್ಯಾನಿಟೈಸರ್ ವ್ಯವಸ್ಥೆ ಮಾಡಲಾಗಿತ್ತು. ಕೋವಿಡ್ ನಿಯಮಾವಳಿ ಹಿನ್ನೆಲೆಯಲ್ಲಿ ಜಿಲ್ಲೆಯ ಚರ್ಚುಗಳಲ್ಲಿ ಸೀಮಿತ ಸಂಖ್ಯೆಯ ಭಕ್ತಾದಿಗಳಿಗೆ ಮಾತ್ರ ಅವಕಾಶ ನೀಡಲಾಗಿತ್ತು. ಹೆಚ್ಚಿನ ಇಗರ್ಜಿಗಳಲ್ಲಿ ಬಲಿಪೂಜೆಯನ್ನು ನೇರ ಪ್ರಸಾರದ ಮೂಲಕ ವೀಕ್ಷಿಸಲು ಅವಕಾಶ ಕಲ್ಪಿಸಲಾಗಿತ್ತು.

ಮಿಲಾಗ್ರಿಸ್ ಕ್ಯಾಥೆಡ್ರಲ್ ನ ರೆಕ್ಟರ್ ವಂ. ವಲೇರಿಯನ್ ಮೆಂಡೊನ್ಸಾ, ಸಹಾಯಕ ಧರ್ಮಗುರು ವಂ. ಕ್ಯಾನ್ಯೂಟ್ ನೊರೋನ್ಹ ಹಾಗೂ ಇತರ ಅತಿಥಿ ಧರ್ಮಗುರುಗಳು ಇದ್ದರು.

ನಿಮಗೆ ಈ ಸುದ್ದಿ ಇಷ್ಟವಾಯ್ತಾ?
ಹಾಗಾದರೆ ಇತರರಿಗೂ SHARE ಮಾಡಿ ಓದಿಸಿ...

ಕಾಮೆಂಟ್ ಮಾಡಿ

error: Content is protected !!