Monday, July 4, 2022
Home ಸಮಾಚಾರ ಜಿಲ್ಲಾ ಸುದ್ದಿ ಕರಂಬಳ್ಳಿ ದೇವಳಕ್ಕೆ ಸಚಿವ ಚವ್ಹಾಣ್ ಭೇಟಿ

ಕರಂಬಳ್ಳಿ ದೇವಳಕ್ಕೆ ಸಚಿವ ಚವ್ಹಾಣ್ ಭೇಟಿ

ಉಡುಪಿ: ಕಳೆದ ದಿನವಷ್ಟೇ ಬ್ರಹ್ಮಕಲಶೋತ್ಸವ ನಡೆದ ಐತಿಹಾಸಿಕ ಕರಂಬಳ್ಳಿ ಶ್ರೀ ವೆಂಕಟರಮಣ ದೇವಸ್ಥಾನಕ್ಕೆ ಮಂಗಳವಾರ ಪಶುಸಂಗೋಪನೆ, ಹಜ್ ಮತ್ತು ವಕ್ಫ್ ಖಾತೆ ಸಚಿವ ಪ್ರಭು ಬಿ. ಚವ್ಹಾಣ್ ಭೇಟಿ ನೀಡಿ ಪೂಜಾ ಕೈಂಕರ್ಯದಲ್ಲಿ ಭಾಗವಹಿಸಿದರು.

ದೇವಸ್ಥಾನದ ಆಡಳಿತ ಮೊಕ್ತೇಸರ, ಶಾಸಕ ಕೆ. ರಘುಪತಿ ಭಟ್ ಸಚಿವರನ್ನು ದೇವಸ್ಥಾನಕ್ಕೆ ಬರಮಾಡಿಕೊಂಡರು.

ಈ ಸಂದರ್ಭದಲ್ಲಿ ಕರಂಬಳ್ಳಿ ವೆಂಕಟರಮಣ ದೇವಸ್ಥಾನದ ಆಡಳಿತ ಮಂಡಳಿ ಸದಸ್ಯರಾದ ಕೆ. ಲಕ್ಷ್ಮಣ ಶೇರಿಗಾರ್, ಸುಂದರ ಅಮೀನ್ ಮತ್ತು ಶೈಲಶ್ರೀ ದಿವಾಕರ ಶೆಟ್ಟಿ, ಪ್ರಧಾನ ಅರ್ಚಕ ದಿವಾಕರ ಐತಾಳ್, ಪರ್ಯಾಯ ಅರ್ಚಕ ಗೋವಿಂದ ಐತಾಳ್ ಹಾಗೂ ರಾಧಾಕೃಷ್ಣ ಬಾರಿತ್ತಾಯ, ಜೀರ್ಣೋದ್ಧಾರ ಸಮಿತಿ ಪ್ರಧಾನ ಕಾರ್ಯದರ್ಶಿ ರಮೇಶ್ ಬಾರಿತ್ತಾಯ, ಜಿ. ವಾಸುದೇವ ಭಟ್ ಮೊದಲಾದವರಿದ್ದರು

ನಿಮಗೆ ಈ ಸುದ್ದಿ ಇಷ್ಟವಾಯ್ತಾ?
ಹಾಗಾದರೆ ಇತರರಿಗೂ SHARE ಮಾಡಿ ಓದಿಸಿ...

ಕಾಮೆಂಟ್ ಮಾಡಿ

error: Content is protected !!