ಸುದ್ದಿಕಿರಣ ವರದಿ
ಸೋಮವಾರ, ಜುಲೈ 25
ಸೋದೆ ಕ್ಷೇತ್ರಕ್ಕೆ ಪ್ರಮೋದ್ ಭೇಟಿ
ಶಿರಸಿ: ಮಾಜಿ ಸಚಿವ ಹಾಗೂ ಬಿಜೆಪಿ ಮುಖಂಡ ಪ್ರಮೋದ್ ಮಧ್ವರಾಜ್ ಈಚೆಗೆ ಸೋದೆ ವಾದಿರಾಜ ಮಠಕ್ಕೆ ಆಗಮಿಸಿ ಶ್ರೀ ವಾದಿರಾಜ ಗುರುಸಾರ್ವಭೌಮರು ಹಾಗೂ ಶ್ರೀ ಭೂತರಾಜರ ದರ್ಶನ ಪಡೆದರು.
ಶ್ರೀಕ್ಷೇತ್ರದಲ್ಲಿ ಚಾತುರ್ಮಾಸ್ಯ ವ್ರತನಿಷ್ಠರಾದ ಸೋದೆ ಮಠಾಧೀಶ ಶ್ರೀ ವಿಶ್ವವಲ್ಲಭತೀರ್ಥ ಶ್ರೀಪಾದರನ್ನು ಭೇಟಿ ಮಾಡಿ, ಫಲ ಸಮರ್ಪಿಸಿ ಆಶೀರ್ವಾದ ಪಡೆದರು.
ಜೊತೆಗೆ ಸೋದೆಯಲ್ಲೇ ಚಾತುರ್ಮಾಸ್ಯ ವ್ರತಾಚರಣೆಯಲ್ಲಿರುವ ಭೀಮನಕಟ್ಟೆ ಮಠಾಧೀಶ ಶ್ರೀ ರಘುವರೇಂದ್ರತೀರ್ಥರು ಹಾಗೂ ಶೀರೂರು ಮಠಾಧೀಶ ಶ್ರೀ ವೇದವರ್ಧನತೀರ್ಥ ಶ್ರೀಪಾದರನ್ನೂ ಭೇಟಿ ಮಾಡಿ ಫಲ ಮಂತ್ರಾಕ್ಷತೆ ಪಡೆದರು