ಬೆಂಗಳೂರು: ಕಳೆದ ವರ್ಷ ವಿಧಿವಶರಾದ ಪೇಜಾವರ ಶ್ರೀ ವಿಶ್ವೇಶತೀರ್ಥ ಶ್ರೀಪಾದರ ಮೂಲವೃಂದಾವನ ಪ್ರತಿಷ್ಠಾಪೂರ್ವಕ ಪ್ರಥಮ ಆರಾಧನಾ ಮಹೋತ್ಸವ ಇಲ್ಲಿನ ಕತ್ರಿಗುಪ್ಪೆ ಶ್ರೀಪೂರ್ಣಪ್ರಜ್ಞ ವಿದ್ಯಾಪೀಠ ಆವರಣದಲ್ಲಿ ವೈಭವದಿಂದ ನಡೆದಿರುವಂತೆಯೇ ಮಾಗಡಿ ಪೂರ್ಣಪ್ರಮತಿ ಗುರುಕುಲ ಆವರಣದಲ್ಲಿ ಸುಂದರ ಪ್ರಕೃತಿಯ ನಡುವೆ ಶ್ರೀಪಾದರ ಪ್ರಥಮ ಮೃತ್ತಿಕಾ ವೃಂದಾವನ ಪ್ರತಿಷ್ಠಾಪಿಸಲಾಯಿತು.
ಪೇಜಾವರ ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಪಾದರು ವಿದ್ಯುಕ್ತವಾಗಿ ಪ್ರತಿಷ್ಠಾಪನೆ ನೆರವೇರಿಸಿದರು.
ವೈದಿಕರಿಂದ ವಿವಿಧ ಧಾರ್ಮಿಕ ವಿಧಿಗಳು ವೈಭವದಿಂದ ನಡೆದವು.
ಶ್ರೀ ವಿಶ್ವೇಶತೀರ್ಥ ಶ್ರೀಪಾದರು ಈ ಗುರುಕುಲದ ಆಡಳಿತ ಮಂಡಳಿ ಗೌರವಾಧ್ಯಕ್ಷರಾಗಿದ್ದರು. ಇಲ್ಲಿ ಅಪ್ಪಟ ಭಾರತೀಯ ಗುರುಕುಲ ಮಾದರಿಯ ಶಿಕ್ಷಣ ಮತ್ತು ಆಧುನಿಕ ಶಿಕ್ಷಣ ನೀಡಲಾಗುತ್ತಿದೆ.
ನಾಡಿನ ಇನ್ನೂ ಅನೇಕ ಕಡೆಗಳಲ್ಲಿ ಭಕ್ತರು ಗುರುಗಳ ಮೃತ್ತಿಕಾ ವೃಂದಾವನ ಸ್ಥಾಪನೆಗೆ ಬೇಡಿಕೆ ಮುಂದಿಡುತ್ತಿದ್ದಾರೆ. ಆ ಬಗ್ಗೆ ಪರಿಶೀಲಿಸಿ ನಿರ್ಧರಿಸುವುದಾಗಿ ಶ್ರೀ ವಿಶ್ವಪ್ರಸನ್ನತೀರ್ಥರು ತಿಳಿಸಿದ್ದಾರೆ