Monday, August 15, 2022
Home ಸಮಾಚಾರ ರಾಜ್ಯ ವಾರ್ತೆ ಪ್ರವೀಣ್ ಕೇಸ್ ಎನ್.ಐ.ಎ.ಗೆ: ಸಿಎಂ ಘೋಷಣೆ

ಪ್ರವೀಣ್ ಕೇಸ್ ಎನ್.ಐ.ಎ.ಗೆ: ಸಿಎಂ ಘೋಷಣೆ

ಸುದ್ದಿಕಿರಣ ವರದಿ
ಶುಕ್ರವಾರ, ಜುಲೈ 29

ಪ್ರವೀಣ್ ಕೇಸ್ ಎನ್.ಐ.ಎ.ಗೆ: ಸಿಎಂ ಘೋಷಣೆ
ಬೆಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ಳಾರೆ ಯುವಕ, ಜಿಲ್ಲಾ ಬಿಜೆಪಿ ಯುವ ಮೋರ್ಚಾ ನಾಯಕ ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣದ ತನಿಖೆ ರಾಷ್ಟ್ರೀಯ ತನಿಖಾ ದಳ (ಎನ್.ಐ.ಎ.)ಕ್ಕೆ ವಹಿಸಿರುವುದಾಗಿ ಮುಖ್ಯಮಂತ್ರಿ ಬೊಮ್ಮಾಯಿ ಪ್ರಕಟಿಸಿದ್ದಾರೆ.

ಪ್ರವೀಣ್ ಘಟನೆಯ ತನಿಖೆ ಸಂದರ್ಭ ಎಸ್.ಡಿ.ಪಿ.ಐ ಕಾರ್ಯಕರ್ತರ ಬಂಧನವಾದ ಬೆನ್ನಲ್ಲೇ ತನಿಖೆಯನ್ನು ರಾಷ್ಟ್ರೀಯ ತನಿಖಾ ದಳಕ್ಕೆ ಒಪ್ಪಿಸಿ, ರಾಜ್ಯ ಸರ್ಕಾರ ಆದೇಶಿಸಿದೆ.

ಕೇಂದ್ರ ಗೃಹ ಇಲಾಖೆಯ ಅಧೀನದ ಎನ್.ಐ.ಎ ಶೀಘ್ರದಲ್ಲಿ ಬೆಳ್ಳಾರೆಗೆ ಬಂದು ತನಿಖೆ ನಡೆಸಲಿದೆ.

ಪ್ರವೀಣ್ ಹತ್ಯೆ ಪ್ರಕರಣದ ತನಿಖೆಯನ್ನು ಎನ್.ಐ.ಎ.ಗೆ ಒಪ್ಪಿಸಬೇಕೆಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಅವರು ಗೃಹ ಸಚಿವರಿಗೆ ಪತ್ರ ಬರೆದಿದ್ದರು.

ಈಗಾಗಲೇ ರಾಜ್ಯದ ಅನೇಕ ಪ್ರಕರಣಗಳು ಎನ್.ಐ.ಎ ತನಿಖಾ ಹಂತದಲ್ಲಿದೆ ಎಂದು ತಿಳಿದುಬಂದಿದೆ

ನಿಮಗೆ ಈ ಸುದ್ದಿ ಇಷ್ಟವಾಯ್ತಾ?
ಹಾಗಾದರೆ ಇತರರಿಗೂ SHARE ಮಾಡಿ ಓದಿಸಿ...

ಕಾಮೆಂಟ್ ಮಾಡಿ

error: Content is protected !!