Monday, July 4, 2022
Home ಸಮಾಚಾರ ರಾಷ್ಟ್ರೀಯ ವಾರ್ತೆ ಸ್ಕಿಲ್ ಇಂಡಿಯಾ ಮಿಷನ್ ಗೆ ಮತ್ತಷ್ಟು ವೇಗ: ಪ್ರಧಾನಿ ಆಶಯ

ಸ್ಕಿಲ್ ಇಂಡಿಯಾ ಮಿಷನ್ ಗೆ ಮತ್ತಷ್ಟು ವೇಗ: ಪ್ರಧಾನಿ ಆಶಯ

ನವದೆಹಲಿ: ವೇಗವಾಗಿ ತಂತ್ರಜ್ಞಾನ ಬದಲಾಗುತ್ತಿದ್ದು, ಅದಕ್ಕೆ ಪೂರಕವಾಗಿ ಜನರ ಕೌಶಲ್ಯ ವೃದ್ಧಿ, ಮರು ಕೌಶಲ್ಯಕ್ಕೆ ಒತ್ತುನೀಡಬೇಕಾದ ಅಗತ್ಯತೆ ಇದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.

ವಿಶ್ವ ಯುವ ಕೌಶಲ್ಯ ದಿನಾಚರಣೆ ಸಂದರ್ಭದಲ್ಲಿ ಮಾತನಾಡಿದ ಅವರು, ಹೊಸ ಪೀಳಿಗೆಯ ಕೌಶಲ್ಯ ಅಭಿವೃದ್ಧಿ ರಾಷ್ಟ್ರೀಯ ಅಗತ್ಯ ಎಂದು ಪ್ರತಿಪಾಸಿದರು.

ಸ್ಕಿಲ್ ಇಂಡಿಯಾ ಮಿಷನ್ ಗೆ ಇನ್ನಷ್ಟ ವೇಗ ನೀಡುವಂತೆ ಕರೆ ನೀಡಿದ ಪ್ರಧಾನಿ, ಗಳಿಕೆ ಆರಂಭಗೊಂಡ ಬಳಿಕ ಕಲಿಕೆ ಮರೆಯಬೇಡಿ ಎಂದು ಕಿವಿಮಾತು ಹೇಳಿದರು. ಕೌಶಲ್ಯ ಇರುವವರಿಗೆ ಮಾತ್ರ ಬೆಳವಣಿಗೆ ಸಾಧ್ಯ. ಕೌಶಲ್ಯ ವೃದ್ಧಿಸುವ ಕ್ರಿಯೆ ನಡೆಯಬೇಕು ಎಂದವರು ಸಲಹೆ ನೀಡಿದ್ದಾರೆ.

ಭಾರತ, ಚತುರ ಮತ್ತು ನುರಿತ ಮಾನವ ಸಂಪನ್ಮೂಲವನ್ನು ಜಗತ್ತಿಗೆ ಒದಗಿಸುತ್ತಿದೆ. ಹೀಗಾಗಿ ದೇಶದ ಯುವಜನರನ್ನು ಈ ನಿಟ್ಟಿನಲ್ಲಿ ಕೌಶಲ್ಯಗೊಳಿಸುವುದು ನಮ್ಮ ಕಾರ್ಯತಂತ್ರದ ತಿರುಳಾಗಿರಬೇಕು.

ದೇಶದ 1.25 ಕೋಟಿಗೂ ಹೆಚ್ಚು ಯುವಜನರಿಗೆ ಪ್ರಧಾನಮಂತ್ರಿ ಕೌಶಲ್ಯ ವಿಕಾಸ ಯೋಜನೆಯಡಿ ತರಬೇತಿ ನೀಡಲಾಗಿದೆ ಎಂದು ಪ್ರಧಾನಿ ಮಾಹಿತಿ ನೀಡಿದರು

ನಿಮಗೆ ಈ ಸುದ್ದಿ ಇಷ್ಟವಾಯ್ತಾ?
ಹಾಗಾದರೆ ಇತರರಿಗೂ SHARE ಮಾಡಿ ಓದಿಸಿ...

ಕಾಮೆಂಟ್ ಮಾಡಿ

error: Content is protected !!