Saturday, July 2, 2022
Home ಸಮಾಚಾರ ರಾಷ್ಟ್ರೀಯ ವಾರ್ತೆ ದೇವಳ ರಕ್ಷಣೆ ಅಭಿಯಾನಕ್ಕೆ ಮೆಚ್ಚುಗೆ

ದೇವಳ ರಕ್ಷಣೆ ಅಭಿಯಾನಕ್ಕೆ ಮೆಚ್ಚುಗೆ

ಉಡುಪಿ: ಜಗ್ಗಿ ವಾಸುದೇವ ಅವರು ಈಶ ಫೌಂಡೇಶನ್ ಮೂಲಕ ಹಮ್ಮಿಕೊಂಡಿರುವ ದೇವಳ ರಕ್ಷಣೆ ಅಭಿಯಾನವನ್ನು ಉಡುಪಿ ಅಷ್ಟಮಠಗಳಲ್ಲೊಂದಾದ ಪುತ್ತಿಗೆ ಮಠದ ಹಿರಿಯ ಯತಿ, ಅಂತಾರಾಷ್ಟ್ರೀಯ ಖ್ಯಾತಿಯ ಸಂತ ಶ್ರೀ ಸುಗುಣೇಂದ್ರತೀರ್ಥ ಶ್ರೀಪಾದರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಈ ಕುರಿತು ಹೇಳಿಕೆ ನೀಡಿರುವ ಅವರು, ಈ ರೀತಿಯ ಅಭಿಯಾನ ಎಂದೋ ಆಗಬೇಕಿತ್ತು. ಇದೀಗ ಜಗ್ಗಿ ವಾಸುದೇವ ಅವರ ನೇತೃತ್ವದಲ್ಲಿ ನಡೆಯುತ್ತಿರುವ ಅಭಿಯಾನ ಹಾಗೂ ಅದಕ್ಕೆ ಲಭಿಸುತ್ತಿರುವ ವ್ಯಾಪಕ ಬೆಂಬಲ ಲಭಿಸುತ್ತಿರುವುದು ತಮಗೆ ಅತೀತ ಸಂತಸ ತಂದಿದೆ ಎಂದಿದ್ದಾರೆ.

ಸರ್ಕಾರದ ಹಸ್ತಕ್ಷೇಪ ಸಲ್ಲ
ಎಲ್ಲಾ ಕಡೆಗಳಲ್ಲೂ ರಾಜಕೀಯ ಮತ್ತು ಧಾರ್ಮಿಕ ಸಂಸ್ಥೆಗಳು ಪ್ರತ್ಯೇಕವಾಗಿ ಕಾರ್ಯನಿರ್ವಹಿಸಬೇಕು. ಧಾರ್ಮಿಕ ಸಂಸ್ಥೆಗಳಲ್ಲಿ ರಾಜಕೀಯ ವ್ಯಕ್ತಿಗಳ ಹಸ್ತಕ್ಷೇಪ ಸರಿಯಲ್ಲ. ಆದ್ದರಿಂದ ಆದಷ್ಟು ಶೀಘ್ರದಲ್ಲಿ ಸರ್ಕಾರಗಳ ಅಧೀನದಲ್ಲಿರುವ ದೇವಸ್ಥಾನಗಳನ್ನು ಭಕ್ತರಿಗೆ ನೀಡಬೇಕು. ಆಗ ಮಾತ್ರ ದೇವಾಲಯಗಳು ಅಭಿವೃದ್ಧಿ ಹೊಂದಲು ಸಾಧ್ಯವಾಗುತ್ತದೆ ಎಂದು ಶ್ರೀ ಸುಗುಣೇಂದ್ರತೀರ್ಥ ಶ್ರೀಪಾದರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಕೇವಲ ಹಿಂದೂಗಳ ಶ್ರದ್ಧಾಕೇಂದ್ರಗಳನ್ನು ಮಾತ್ರ ಸರ್ಕಾರ ತನ್ನ ಅಧೀನದಲ್ಲಿಟ್ಟುಕೊಂಡಿದೆ ಎಂದು ಖೇದ ವ್ಯಕ್ತಪಡಿಸಿರುವ ಪುತ್ತಿಗೆ ಶ್ರೀಗಳು, ಭಕ್ತರ ಅಧೀನಕ್ಕೆ ದೇವಾಲಯಗಳನ್ನು ನೀಡುವ ಮೂಲಕ ನಿಷ್ಪಕ್ಷಪಾತತೆ ಹಾಗೂ ಧಾರ್ಮಿಕ ಸ್ವಾತಂತ್ರ್ಯ ಲಭಿಸುವಂತಾಗುತ್ತದೆ. ಅದು ಶೀಘ್ರ ಈಡೇರಲಿ ಎಂದು ಆಶಿಸಿದ್ದಾರೆ.

ನಿಮಗೆ ಈ ಸುದ್ದಿ ಇಷ್ಟವಾಯ್ತಾ?
ಹಾಗಾದರೆ ಇತರರಿಗೂ SHARE ಮಾಡಿ ಓದಿಸಿ...

ಕಾಮೆಂಟ್ ಮಾಡಿ

error: Content is protected !!