Sunday, October 2, 2022
Home ಸಮಾಚಾರ ಜಿಲ್ಲಾ ಸುದ್ದಿ ಜಿಲ್ಲಾ ಯುವ ಬ್ರಾಹ್ಮಣ ಪರಿಷತ್ ವತಿಯಿಂದ ರಕ್ಷಾ ಬಂಧನ

ಜಿಲ್ಲಾ ಯುವ ಬ್ರಾಹ್ಮಣ ಪರಿಷತ್ ವತಿಯಿಂದ ರಕ್ಷಾ ಬಂಧನ

ಸುದ್ದಿಕಿರಣ ವರದಿ
ಭಾನುವಾರ, ಆಗಸ್ಟ್ 14

ಜಿಲ್ಲಾ ಯುವ ಬ್ರಾಹ್ಮಣ ಪರಿಷತ್ ವತಿಯಿಂದ ರಕ್ಷಾ ಬಂಧನ
ಉಡುಪಿ: ಜಿಲ್ಲಾ ಯುವ ಬ್ರಾಹ್ಮಣ ಪರಿಷತ್ ವತಿಯಿಂದ ಕುಕ್ಕಿಕಟ್ಟೆ ಶ್ರೀಕೃಷ್ಣ ಬಾಲನಿಕೇತನದ ಅವಕಾಶ ವಂಚಿತ ಮಕ್ಕಳೊಂದಿಗೆ ಸ್ವಾತಂತ್ರ್ಯ ಅಮೃತ ಮಹೋತ್ಸವ ಆಚರಣೆ ಮತ್ತು ರಕ್ಷಾ ಬಂಧನ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.

ಸಂಪನ್ಮೂಲವ್ಯಕ್ತಿಯಾಗಿದ್ದ ಪೂರ್ಣಪ್ರಜ್ಞ ಕಾಲೇಜಿನ ಸಂಸ್ಕೃತ ವಿಭಾಗ ಮುಖ್ಯಸ್ಥ ಡಾ| ರಮೇಶ್ ಟಿ. ಎಸ್., ರಕ್ಷಾ ಬಂಧನ ಹಾಗೂ ರಾಷ್ಠ್ರ ಪ್ರೇಮ ವಿಷಯ ಕುರಿತು ಉಪನ್ಯಾಸ ನೀಡಿದರು.

ಮುಖ್ಯ ಅತಿಥಿ ಶ್ರೀಕೃಷ್ಣ ಬಾಲನಿಕೇತನ ಕಾರ್ಯದರ್ಶಿ ರೋಟರಿ 3182ರ ವಲಯ 4ರ ಸಹಾಯಕ ಗವರ್ನರ್ ರಾಮಚಂದ್ರ ಉಪಾಧ್ಯಾಯ ಶುಭಾಶಂಸನೆಗೈದರು.

ಈ ಸಂದರ್ಭದಲ್ಲಿ ಯುವ ಬ್ರಾಹ್ಮಣ ಪರಿಷತ್ತಿನ ಆರ್ಥಿಕ ಚಟುವಟಿಕೆಗಳಿಗೆ ಅನುಕೂಲವಾಗುವಂತೆ ಯು.ಪಿ.ಐ. ಕ್ಯೂ ಆರ್ ಕೋಡ್ ಅನಾವರಣಗೊಳಿಸಲಾಯಿತು.

ಭಾವಿ ಪರ್ಯಾಯ ಪುತ್ತಿಗೆ ಮಠಾಧೀಶ ಶ್ರೀ ಸುಗುಣೇಂದ್ರತೀರ್ಥ ಶ್ರೀಪಾದರ ಮಹಾತ್ವಾಕಾಂಕ್ಷಿ ಯೋಜನೆ ಕೋಟಿ ಗೀತಾ ಲೇಖನ ಯಜ್ಞದ ಹೊತ್ತಗೆಯನ್ನು ಬಾಲನಿಕೇತನದ 15 ಮಂದಿ ಹಿರಿಯ ವಿದ್ಯಾರ್ಥಿಗಳಿಗೆ ಉಚಿತವಾಗಿ ನೀಡಲಾಯಿತು.

ಬಾಲನಿಕೇತನದ ಮಕ್ಕಳಿಗೆ ಹಮ್ಮಿಕೊಂಡ ವಿವಿಧ ಸ್ಪರ್ಧೆಗಳ ವಿಜೇತರಿಗೆ ಬಹುಮಾನ ವಿತರಿಸಲಾಯಿತು.

ಮಕ್ಕಳಿಗೆ ನಿತ್ಯೋಪಯೋಗಿ ಆವಶ್ಯಕ ವಸ್ತುಗಳು ಹಾಗೂ ಲೇಖನ ಸಾಮಗ್ರಿಗಳನ್ನು ವಿತರಿಸಲಾಯಿತು.

ಪರಿಷತ್ತಿನ ಸದಸ್ಯರಿಂದ ಮಕ್ಕಳಿಗೆ ರಕ್ಷಾ ಬಂಧನ ನೇರವೇರಿತು.

ಕೋಶಾಧಿಕಾರಿ ಕುಮಾರಸ್ವಾಮಿ ಉಡುಪ ನೂತನ ಸದಸ್ಯರನ್ನು ಪರಿಚಯಿಸಿದರು.

ಪರಿಷತ್ ಅಧ್ಯಕ್ಷ ಚೈತನ್ಯ ಎಂ. ಜಿ. ಸ್ವಾಗತಿಸಿ, ಕಾರ್ಯದರ್ಶಿ ವಿವೇಕಾನಂದ ಎನ್. ವಂದಿಸಿದರು.

ಬಳಿಕ ಬಾಲನಿಕೇತನ ಮಕ್ಕಳಿಗಾಗಿ ಮೋಜಿನಾಟ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.

ನಿಮಗೆ ಈ ಸುದ್ದಿ ಇಷ್ಟವಾಯ್ತಾ?
ಹಾಗಾದರೆ ಇತರರಿಗೂ SHARE ಮಾಡಿ ಓದಿಸಿ...

ಕಾಮೆಂಟ್ ಮಾಡಿ

error: Content is protected !!