Wednesday, July 6, 2022
Home ಸಮಾಚಾರ ಜಿಲ್ಲಾ ಸುದ್ದಿ ಗಣೇಶೋತ್ಸವದಲ್ಲಿ ಭಾಗಿಯಾದ ನಟ ರಕ್ಷಿತ್ ಶೆಟ್ಟಿ

ಗಣೇಶೋತ್ಸವದಲ್ಲಿ ಭಾಗಿಯಾದ ನಟ ರಕ್ಷಿತ್ ಶೆಟ್ಟಿ

ಗಣೇಶೋತ್ಸವದಲ್ಲಿ ಭಾಗಿಯಾದ ನಟ ರಕ್ಷಿತ್ ಶೆಟ್ಟಿ

(ಸುದ್ದಿಕಿರಣ ವರದಿ)
ಉಡುಪಿ: ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ಅಲೆವೂರು ಸಾರ್ವಜನಿಕ ಗಣೇಶೋತ್ಸವದಲ್ಲಿ ಶನಿವಾರ ಭಾಗವಹಿಸಿ ಗಣಪತಿ ದೇವರ ದರುಶನ ಪಡೆದರು.

ಗುಡ್ಡೆಯಂಗಡಿ ಜಂಕ್ಷನ್ ನಲ್ಲಿ ನಡೆಸಲಾದ 37ನೇ ವರ್ಷದ ಸಾರ್ವಜನಿಕ ಗಣೇಶೋತ್ಸವದಲ್ಲಿ ಕುಟುಂಬ ಸಮೇತರಾಗಿ ಆಗಮಿಸಿದ ರಕ್ಷಿತ್ ಶೆಟ್ಟಿ, ತನ್ನ ಊರಿನ ಅಲೆವೂರು ಕಟ್ಟೆ ಗಣಪತಿಯ ದರುಶನ ಪಡೆದರು.

ಅವರೊಂದಿಗೆ ತಂದೆ- ತಾಯಿ, ಅಣ್ಣ- ಅತ್ತಿಗೆ ಮತ್ತು ಅವರ ಮಕ್ಕಳು ಇದ್ದರು.

ಇದೇ ವೇಳೆ ರಕ್ಷಿತ್ ಶೆಟ್ಟಿ ಕುಟುಂಬ ವತಿಯಿಂದ ಗಣಪತಿ ದೇವರಿಗೆ ವಿಶೇಷ ಪೂಜೆ ಸಲ್ಲಿಸಲಾಯಿತು.

ಲೆಟ್ಸ್ ಕಿಲ್ ಗಾಂಧಿ ಎಂಬ ಕಿರುಚಿತ್ರದ ಮೂಲಕ ರಕ್ಷಿತ್ ಬಣ್ಣದ ಬದುಕು ಆರಂಭ ಮಾಡಿದ್ದ ರಕ್ಷಿತ್ ಶೆಟ್ಟಿ, ಆ ವೇಳೆ ಅಲೆವೂರು ಕಟ್ಟೆ ಗಣಪತಿ ಗುಡಿಯಲ್ಲೇ ಮೊದಲ ಪೂಜೆ ಸಲ್ಲಿಸಿದ್ದರು.

ನಿಮಗೆ ಈ ಸುದ್ದಿ ಇಷ್ಟವಾಯ್ತಾ?
ಹಾಗಾದರೆ ಇತರರಿಗೂ SHARE ಮಾಡಿ ಓದಿಸಿ...

ಕಾಮೆಂಟ್ ಮಾಡಿ

error: Content is protected !!