Thursday, July 7, 2022
Home ಸಮಾಚಾರ ಜಿಲ್ಲಾ ಸುದ್ದಿ ಪ್ರತಿಷ್ಠಿತ ರಾಮರಾಜ್ ವಸ್ತ್ರ ಮಳಿಗೆ ಉಡುಪಿಯಲ್ಲಿ ಆರಂಭ

ಪ್ರತಿಷ್ಠಿತ ರಾಮರಾಜ್ ವಸ್ತ್ರ ಮಳಿಗೆ ಉಡುಪಿಯಲ್ಲಿ ಆರಂಭ

ಸುದ್ದಿಕಿರಣ ವರದಿ
ಸೋಮವಾರ, ಮಾರ್ಚ್ 21

ಪ್ರತಿಷ್ಠಿತ ರಾಮರಾಜ್ ವಸ್ತ್ರ ಮಳಿಗೆ ಉಡುಪಿಯಲ್ಲಿ ಆರಂಭ
ಉಡುಪಿ: ದೇಶ ಹಾಗೂ ವಿದೇಶಗಳಲ್ಲಿ ಮನ್ನಣೆ ಪಡೆದಿರುವ ರಾಮರಾಜ್ ವಸ್ತ್ರ ಮಳಿಗೆ ಸೋಮವಾರ ಇಲ್ಲಿನ ಕುಂಜಿಬೆಟ್ಟು ಬಿಸಿನೆಸ್ ಬೇ ಸೆಂಟರ್ ನ ನೆಲಮಾಳಿಗೆಯಲ್ಲಿ ಆರಂಭಗೊಂಡಿತು.

ಪೇಜಾವರ ಮಠದ ಸಾರ್ವಜನಿಕ ಅಧಿಕಾರಿ ಹಾಗೂ ನಿವೃತ್ತ ಬ್ಯಾಂಕರ್ ಸುಬ್ರಹ್ಮಣ್ಯ ಭಟ್ ನೂತನ ಮಳಿಗೆಯನ್ನು ಉದ್ಘಾಟಿಸಿದರು.

ಸುಪರಿಚಿತವಾದ ರಾಮರಾಜ್ ವಸ್ತ್ರೋದ್ಯಮ ಉತ್ಕೃಷ್ಟ ಗುಣಮಟ್ಟದ ಧೋತಿಗಳಿಗೆ ಹೆಸರಾಗಿದೆ. ಭಾರತೀಯ ಉಡುಗೆ ತೊಡುಗೆಗಳನ್ನು ಯುವಜನತೆಯಲ್ಲಿ ಪರಿಚಯಿಸುವಲ್ಲಿ ಮುಂಚೂಣಿಯಲ್ಲಿದೆ. ಉಡುಪಿಯಲ್ಲೂ ಈ ಸಂಸ್ಥೆ ಕಾರ್ಯಾರಂಭ ಮಾಡಿರುವುದು ಸಂತಸ ತಂದಿದೆ. ಸಂಸ್ಥೆ, ಗ್ರಾಹಕರನ್ನು ಆಕರ್ಷಿಸುವಲ್ಲಿ ಯಶಸ್ವಿಯಾಗಲಿ ಎಂದು ಹಾರೈಸಿದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಏರಿಯಾ ಮ್ಯಾನೇಜರ್ ಪ್ರಸನ್ನಕುಮಾರ್, ಕರ್ನಾಟಕದ 42ನೆಯ ಹಾಗೂ ದಕ್ಷಿಣ ಭಾರತದ 207ನೇ ಶೋ ರೂಮ್ ಇದಾಗಿದೆ. ರಾಮರಾಜ್ ಸಂಸ್ಥೆ ಕೇವಲ ಧೋತಿಗಳಿಗೆ ಮಾತ್ರ ಸೀಮಿತವಾಗಿರದೇ ಮಹಿಳೆಯರು ಮತ್ತು ಮಕ್ಕಳಿಗೂ ಅಗತ್ಯವಿರುವ ವಿವಿಧ ವಿನ್ಯಾಸ ಮತ್ತು ವೈವಿಧ್ಯಗಳ ಉಡುಪುಗಳ ಸಂಗ್ರಹ ಹೊಂದಿದೆ. ಆ ಮೂಲಕ ಇಡೀ ಕುಟುಂಬಕ್ಕೆ ಅಗತ್ಯವಿರುವ ರೇಷ್ಮೆ ಮತ್ತು ಹತ್ತಿಬಟ್ಟೆಯ ಬೃಹತ್ ಸಂಗ್ರಹ ಯೋಗ್ಯ ಬೆಲೆಯಲ್ಲಿ ಲಭ್ಯವಿದೆ ಎಂದರು.

ಪ್ರಾದೇಶಿಕ ವ್ಯವಸ್ಥಾಪಕ ಜೀವನ್ ಕುಮಾರ್, ಕರಾವಳಿ ಮಂದಿಗೆ ಒಗ್ಗಿಕೊಳ್ಳುವ ಉಡುಪುಗಳ ಸಂಗ್ರಹವೂ ಇಲ್ಲಿದೆ ಎಂದರು.

ರಾಮರಾಜ್ ಸಂಸ್ಥೆ ಕರ್ನಾಟಕ ಹೆಡ್ ರಾಜೇಶ್ ಗಿನನ್, ಬಿಸಿನೆಸ್ ಬೇ ಸೆಂಟರ್ ಮಾಲೀಕ ಅಫ್ಜಲ್ ಹುಸೇನ್, ಜೀನತ್ ಅಫ್ಜಲ್ ಇದ್ದರು.

ಸಂಸ್ಥೆ ಸಿಬಂದಿ ಸತ್ಯ ಶೆಟ್ಟಿ ಸ್ವಾಗತಿಸಿ, ನಿರೂಪಿಸಿದರು.

ಈ ಸಂದರ್ಭದಲ್ಲಿ ಕರಾವಳಿ ಕರ್ನಾಟಕದ ಹೆಮ್ಮೆಯ ಕಲೆ ಯಕ್ಷಗಾನ ಪ್ರದರ್ಶನ ಮತ್ತು ಸ್ಯಾಕ್ಸೊಫೋನ್ ವಾದನ ಕಛೇರಿ ನಡೆಯಿತು

ನಿಮಗೆ ಈ ಸುದ್ದಿ ಇಷ್ಟವಾಯ್ತಾ?
ಹಾಗಾದರೆ ಇತರರಿಗೂ SHARE ಮಾಡಿ ಓದಿಸಿ...

ಕಾಮೆಂಟ್ ಮಾಡಿ

error: Content is protected !!