ಸುದ್ದಿಕಿರಣ ವರದಿ
ಗುರುವಾರ, ಆಗಸ್ಟ್ 4
ಕುಕ್ಕುಂದೂರು ಬಂಟರ ಸಂಘದ ಅಧ್ಯಕ್ಷರಾಗಿ ರವಿ ಶೆಟ್ಟಿ ಆಯ್ಕೆ
ಕಾರ್ಕಳ: ಇಲ್ಲಿನ ಕುಕ್ಕುಂದೂರು ಬಂಟರ ಸೇವಾ ಸಂಘದ ನೂತನ ಅಧ್ಯಕ್ಷರಾಗಿ ಗುತ್ತಿಗೆದಾರ, ಸಮಾಜ ಸೇವಕ
ಕೆ. ರವಿ ಶೆಟ್ಟಿ ಆಯ್ಕೆಯಾಗಿದ್ದಾರೆ.
ಈಚೆಗೆ ನಡೆದ ಸಂಘದ ಮಹಾಸಭೆಯಲ್ಲಿ ಈ ಆಯ್ಕೆ ನಡೆಯಿತು.
ಇತರ ಪದಾಧಿಕಾರಿಗಳಾಗಿ ಪ್ರಧಾನ ಕಾರ್ಯದರ್ಶಿ- ತಾ ಪಂ ಮಾಜಿ ಸದಸ್ಯ ಕೆಳಗಿನ ಅಂಗಡಿಮನೆ ಅಶೋಕ್ ಶೆಟ್ಟಿ, ಕೋಶಾಧಿಕಾರಿ- ಅಶ್ವತ್ಥಪುರ ರಘುನಾಥ ಶೆಟ್ಟಿ, ಉಪಾಧ್ಯಕ್ಷೆ- ಜಯಂತಿ ಶೆಟ್ಟಿ, ಕ್ರೀಡಾ ಅಧ್ಯಕ್ಷೆ – ಅಂತಾರಾಷ್ಟ್ರೀಯ ಕ್ರೀಡಾಪಟು ವಿದ್ಯಾ ಉದಯ ಶೆಟ್ಟಿ, ಸಾಂಸ್ಕೃತಿಕ ಅಧ್ಯಕ್ಷೆ- ಅನಿತಾ ಎ. ಶೆಟ್ಟಿ , ಜೊತೆ ಕಾರ್ಯದರ್ಶಿಗಳಾಗಿ ಹರೀಶ್ ಶೆಟ್ಟಿ ರಾಜೇಶ್ ಶೆಟ್ಟಿ ಮತ್ತು ಸಾಗರ್ ಶೆಟ್ಟಿ ಆಯ್ಕೆಯಾಗಿದ್ದಾರೆ.