Thursday, July 7, 2022
Home ಸಮಾಚಾರ ಜಿಲ್ಲಾ ಸುದ್ದಿ ನಿವೃತ್ತ ಇಸ್ರೋ ವಿಜ್ಞಾನಿ ದುರ್ಮರಣ

ನಿವೃತ್ತ ಇಸ್ರೋ ವಿಜ್ಞಾನಿ ದುರ್ಮರಣ

ಕಾರ್ಕಳ: ನಿವೃತ್ತ ಇಸ್ರೋ ವಿಜ್ಞಾನಿ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ ಘಟನೆ ಇಲ್ಲಿಗೆ ಸಮೀಪದ ಬೈಲೂರು ಬಳಿಯ ಎರ್ಲಪಾಡಿ ಎಂಬಲ್ಲಿ ಸಂಭವಿಸಿದೆ.

ಬೆಂಗಳೂರು ಬಸವನಗುಡಿ ನಿವಾಸಿ, ನಿವೃತ್ತ ಇಸ್ರೋ ವಿಜ್ಞಾನಿ ರತ್ನಾಕರ ಎಸ್. ಸಿ (63 ವ.) ಎಂಬವರೇ ಮೃತರಾದವರಾಗಿದ್ದು, ಅವರು ಗೋವಿಂದೂರು ಎರ್ಲಪಾಡಿ ಶ್ರೀರಾಮಕೃಷ್ಣ ಆಶ್ರಮದಲ್ಲಿ ವಾಸವಾಗಿದ್ದರು.

ಆಶ್ರಮದ ಬಳಿಯ ಸ್ವರ್ಣಾನದಿಗೆ ಸ್ನಾನಕ್ಕೆಂದು ಹೋದವರು ಆಕಸ್ಮಿಕವಾಗಿ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ.

ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ನಿಮಗೆ ಈ ಸುದ್ದಿ ಇಷ್ಟವಾಯ್ತಾ?
ಹಾಗಾದರೆ ಇತರರಿಗೂ SHARE ಮಾಡಿ ಓದಿಸಿ...

ಕಾಮೆಂಟ್ ಮಾಡಿ

error: Content is protected !!