ಸುದ್ದಿಕಿರಣ ವರದಿ
ಶನಿವಾರ, ಮೇ 14
ನಿವೃತ್ತ ಶಿಕ್ಷಕ ಸುಂದರೇಶ ಭಟ್ಟ ಇನ್ನಿಲ್ಲ
ಹೊಸಪೇಟೆ: ನಿವೃತ್ತ ಶಿಕ್ಷಕ, ಇಲ್ಲಿನ ನೆಹರೂ ಕಾಲನಿ ನಿವಾಸಿ ಟಿ. ಸುಂದರೇಶ ಭಟ್ಟ (98) ವಯೋಸಹಜವಾಗಿ ನಿಧನರಾದರು.
ಹೆಸರಾಂತ ಗಣಿತಶಾಸ್ತ್ರದ ಶಿಕ್ಷಕರಾಗಿದ್ದ ಅವರು, ಅನೇಕರಿಗೆ ಪ್ರೀತಿಯ `ನಮ್ಮ ಮಾಸ್ಟರ್’ ಎಂದೇ ಪರಿಚಿತರಾಗಿದ್ದರು.
ಸ್ಥಳೀಯ ಬ್ರಾಹ್ಮಣ ಸಮಾಜದ ಹಿರಿಯರೂ ವಿವಿಧ ಸಂಘಸಂಸ್ಥೆಗಳಲ್ಲಿ ಸಕ್ರಿಯರೂ ಆಗಿದ್ದರು.
ಮೃತರು ಪತ್ನಿ, ನಾಲ್ವರು ಹೆಣ್ಣು ಮಕ್ಕಳು ಹಾಗೂ ಒಬ್ಬ ಮಗನನ್ನು ಅಗಲಿದ್ದಾರೆ.
ಟಿ. ಸುಂದರೇಶ ಭಟ್ಟ ನಿಧನಕ್ಕೆ ಹೊಸಪೇಟೆ ತಾಲೂಕು ಬ್ರಾಹ್ಮಣ ಸಂಘ ಸಂತಾಪ ಸೂಚಿಸಿದೆ.