Monday, August 15, 2022
Home ಸಮಾಚಾರ ಜಿಲ್ಲಾ ಸುದ್ದಿ ಆರ್.ಟಿ.ಓ. ಗಂಗಾಧರ್ ವರ್ಗ, ಬೀಳ್ಕೊಡುಗೆ

ಆರ್.ಟಿ.ಓ. ಗಂಗಾಧರ್ ವರ್ಗ, ಬೀಳ್ಕೊಡುಗೆ

ಸುದ್ದಿಕಿರಣ ವರದಿ
ಶನಿವಾರ, ಜುಲೈ 9

ಆರ್.ಟಿ.ಓ. ಗಂಗಾಧರ್ ವರ್ಗ, ಬೀಳ್ಕೊಡುಗೆ
ಉಡುಪಿ: ಇಲ್ಲಿನ ಪ್ರಾದೇಶಿಕ ಸಾರಿಗೆ ಅಧಿಕಾರಿ ಜೆ.ಪಿ. ಗಂಗಾಧರ್ ಅವರು ಶಿವಮೊಗ್ಗ ಪ್ರಾದೇಶಿಕ ಸಾರಿಗೆ ಅಧಿಕಾರಿಯಾಗಿ ಪದೋನ್ನತಿ ಹೊಂದಿ ವರ್ಗವಾಗಿದ್ದು, ಅವರನ್ನು ಬೀಳ್ಕೊಡಲಾಯಿತು.

ಮಣಿಪಾಲದ ಪ್ರಾದೇಶಿಕ ಸಾರಿಗೆ ಇಲಾಖೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಕಚೇರಿ ಸಿಬಂದಿ, ಜಿಲ್ಲೆಯ ವಾಹನ ಚಾಲನಾ ತರಬೇತಿ ಸಂಸ್ಥೆಗಳ ಪ್ರಾಚಾರ್ಯರು ಮತ್ತು ಉಡುಪಿ ನಾಗರಿಕರು ಸನ್ಮಾನಿಸಿದರು.

ಸನ್ಮಾನ ಸ್ವೀಕರಿಸಿದ ಜೆ.ಪಿ. ಗಂಗಾಧರ್ ತನ್ನ ಸೇವಾವಧಿಯಲ್ಲಿ ಸಹಕರಿಸಿದವರನ್ನು ಸ್ಮರಿಸಿ, ಕೃತಜ್ಞತೆ ಸಲ್ಲಿಸಿದರು.

ನಿವೃತ್ತ ಹಿರಿಯ ವಾಹನ ಪರಿವೀಕ್ಷಕ ಚೆನ್ನಪ್ಪ ಬಿ.ಎಸ್., ಎಸ್.ಡಿ.ಎ. ಶಾಂತರಾಜು, ವಾಹನ ಪರಿವೀಕ್ಷಕ ಸಂತೋಷ ಶೆಟ್ಟಿ, ಕಚೇರಿ ವ್ಯವಸ್ಥಾಪಕಿಯರಾದ ಸರಸ್ವತಿ, ಪಮಿತಾ ಶೆಟ್ಟಿ ಮತ್ತು ಗೀತಾ ಕೆ. ಹಾಗೂ ಸಿಬಂದಿಗಳಾದ ರಾಜೇಶ್ ವಿ. ಶೇಟ್, ಆರತಿ ಆರ್ ಹೆಗ್ಡೆ, ಸುಧಾಂಶು, ಗಣೇಶ ರಾವ್ ಮೊದಲಾದವರಿದ್ದರು.

ನಿಮಗೆ ಈ ಸುದ್ದಿ ಇಷ್ಟವಾಯ್ತಾ?
ಹಾಗಾದರೆ ಇತರರಿಗೂ SHARE ಮಾಡಿ ಓದಿಸಿ...

ಕಾಮೆಂಟ್ ಮಾಡಿ

error: Content is protected !!