Saturday, July 2, 2022
Home ಸಮಾಚಾರ ಜಿಲ್ಲಾ ಸುದ್ದಿ ನಾಲ್ವರು ಸಾಧಕರು, ಸಂಘಸಂಸ್ಥೆಗೆ ಸನ್ಮಾನ

ನಾಲ್ವರು ಸಾಧಕರು, ಸಂಘಸಂಸ್ಥೆಗೆ ಸನ್ಮಾನ

ಉಡುಪಿ: ಪರ್ಯಾಯ ಅದಮಾರು ಶ್ರೀಕೃಷ್ಣಮಠ ಆಶ್ರಯದಲ್ಲಿ ಕೃಷ್ಣಮಠ ರಾಜಾಂಗಣದ ನರಹರಿತೀರ್ಥ ವೇದಿಕೆಯಲ್ಲಿ ನಡೆಯುತ್ತಿರುವ ಪರ್ಯಾಯ ಪಂಚಶತಮಾನೋತ್ಸವ ಕಾರ್ಯಕ್ರಮದಲ್ಲಿ ಬುಧವಾರ ಸೋದೆಮಠ ಶಿಕ್ಷಣ ಮಂಡಳಿ ಕಾರ್ಯದರ್ಶಿಯೂ ಆಗಿರುವ ಉಡುಪಿಯ ಹಿರಿಯ ದಸ್ತಾವೇಜು ಬರಹಗಾರ ರತ್ನಕುಮಾರ್, ವಿಮರ್ಶಕ ಪ್ರೊ. ಮುರಳೀಧರ ಉಪಾಧ್ಯ ಹಿರಿಯಡಕ, ಯಕ್ಷಗಾನ ಕಲಾರಂಗ ಕಾರ್ಯದರ್ಶಿ ಮುರಳಿ ಕಡೆಕಾರ್ ಮತ್ತು ಕೊಡವೂರು ಸಾಯಿಬಾಬಾ ಮಂದಿರ ಆಡಳಿತ ಮೊಕ್ತೇಸರ ತೋಟದಮನೆ ದಿವಾಕರ ಶೆಟ್ಟಿ ಹಾಗೂ ಉಡುಪಿ ಜಿಲ್ಲಾ ಯುವ ಬ್ರಾಹ್ಮಣ ಪರಿಷತ್ ಅವರನ್ನು ಪರ್ಯಾಯ ಅದಮಾರು ಶ್ರೀ ಈಶಪ್ರಿಯತೀರ್ಥ ಶ್ರೀಪಾದರು ಸನ್ಮಾನಿಸಿ, ಆಶೀರ್ವಚನ ನೀಡಿದರು.

ಕರ್ನಾಟಕ ಕರಕುಶಲ ಮಂಡಳಿ ಅಧ್ಯಕ್ಷ ಡಾ. ಬೇಳೂರು ರಾಘವೇಂದ್ರ ಶೆಟ್ಟಿ, ಭೀಮ ಜ್ಯೂವೆಲ್ಲರ್ಸ್ ನ ವಿಷ್ಣುಕಿರಣ್ ಅಭ್ಯಾಗತರಾಗಿದ್ದರು.

ಶೀರೂರು- ಸೋದೆ ಪರಂಪರೆ ಉಪನ್ಯಾಸ
ಅದಕ್ಕೂ ಮುನ್ನ ರಾಜಾಂಗಣದ ನರಹರಿತೀರ್ಥ ವೇದಿಕೆಯಲ್ಲಿ ವಿದ್ವಾನ್ ರಾಘವೇಂದ್ರ ಪುರಾಣಿಕ್ ಹಾಗೂ ರತ್ನಕುಮಾರ್ ಉಡುಪಿ ಅವರು ಶೀರೂರು ಮಠ ಮತ್ತು ಸೋದೆ ಮಠ ಪರಂಪರೆ ಹಾಗೂ ಉಭಯ ಮಠಗಳ ಪರ್ಯಾಯದ ನೆನಪುಗಳ ಉಪನ್ಯಾಸ ನೀಡಿದರು.

ಪರ್ಯಾಯ ಪೀಠಸ್ಥ ಅದಮಾರು ಶ್ರೀಈಶಪ್ರಿಯತೀರ್ಥ ಶ್ರೀಪಾದರು ಹಾಗೂ ಸೋದೆ ಮಠದ ಶ್ರೀ ವಿಶ್ವವಲ್ಲಭತೀರ್ಥ ಶ್ರೀಪಾದರು ಸಾನ್ನಿಧ್ಯ ವಹಿಸಿ, ಆಶೀರ್ವಚನ ನೀಡಿದರುಸಾಂಸ್ಕೃತಿಕ ಕಾರ್ಯಕ್ರಮ
ಬಳಿಕ ರಾಜಾಂಗಣದ ನರಹರಿತೀರ್ಥ ವೇದಿಕೆಯಲ್ಲಿ ನಡೆದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ವಿದ್ವಾನ್ ಕುಮರೇಶ್ ಆರ್. ಚೆನ್ನೈ ಮತ್ತು ಜಯಂತಿ ಕುಮರೇಶ್ ಹಾಗೂ ಬಳಗದವರಿಂದ ವಯಲಿನ್ (ಪಿಟೀಲು) ಮತ್ತು ವೀಣಾವಾದನ ಕಛೇರಿ ನಡೆಯಿತು

ನಿಮಗೆ ಈ ಸುದ್ದಿ ಇಷ್ಟವಾಯ್ತಾ?
ಹಾಗಾದರೆ ಇತರರಿಗೂ SHARE ಮಾಡಿ ಓದಿಸಿ...

ಕಾಮೆಂಟ್ ಮಾಡಿ

error: Content is protected !!