Monday, July 4, 2022
Home ಸಮಾಚಾರ ಜಿಲ್ಲಾ ಸುದ್ದಿ ಮಣಿಪಾಲದಲ್ಲಿ ಸಂಪನ್ನಗೊಂಡ 'ಸಲಾಂ ಕಲಾಮ್'

ಮಣಿಪಾಲದಲ್ಲಿ ಸಂಪನ್ನಗೊಂಡ ‘ಸಲಾಂ ಕಲಾಮ್’

ಮಣಿಪಾಲ: ಸಂಸ್ಕೃತಿ ವಿಶ್ವ ಪ್ರತಿಷ್ಠಾನ ಉಡುಪಿ ಮತ್ತು ಡಾ| ಪಳ್ಳತ್ತಡ್ಕ ಕೇಶವ ಭಟ್ ಮೆಮೋರಿಯಲ್ ಟ್ರಸ್ಟ್ ಮಣಿಪಾಲ ಆಶ್ರಯದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಉಡುಪಿ ಸಹಯೋಗದೊಂದಿಗೆ ಗುರುವಾರ ಇಲ್ಲಿನ ಮಣ್ಣಪಲ್ಲ ನಿರ್ಮಿತಿ ಕೇಂದ್ರದಲ್ಲಿ ಮಾಜಿ ರಾಷ್ಟ್ರಪತಿ ಡಾ| ಅಬ್ದುಲ್ ಕಲಾಮ್ ಅವರ ನೆನಪು ಸಲಾಂ ಕಲಾಮ್ ಕಾರ್ಯಕ್ರಮ ಮಣಿಪಾಲದಲ್ಲಿ ಸಂಪನ್ನಗೊಂಡಿತು.

ಡಾ| ಕಲಾಮ್ ಅವರ ಶಿಷ್ಟಾಚಾರ ಹಾಗೂ ಸಮನ್ವಯ ಅಧಿಕಾರಿಯಾಗಿದ್ದ ಜಯಪ್ರಕಾಶ್ ರಾವ್ ಕೆ. ವಿರಚಿತ ಹಮಾರಾ ಪಿ.ಆರ್.ಓ ಪುಸ್ತಕವನ್ನು ಸುಹಾಸಂ ಅಧ್ಯಕ್ಷ, ಹಾಸ್ಯಸಾಹಿತಿ, ಬಳಕೆದಾರರ ವೇದಿಕೆ ವಿಶ್ವಸ್ಥ ಶಾಂತರಾಜ ಐತಾಳ್ ಅನಾವರಣಗೊಳಿಸಿದರು.

ಉದಯವಾಣಿ ವಿಶ್ರಾಂತ ಉಪಸಂಪಾದಕ ನಿತ್ಯಾನಂದ ಪಡ್ರೆ, ಜಯಪ್ರಕಾಶ್ ಅವರ ಅಬ್ದುಲ್ ಕಲಾಮ್ ಜೊತೆಗಿನ ಸುಮಾರು 40 ಲೇಖನಗಳನ್ನೊಳಗೊಂಡ `ಹಮಾರಾ ಪಿ.ಆರ್.ಓ’ ಪುಸ್ತಕ ಕುರಿತು ಮಾತನಾಡಿ, ಪ್ರತಿಯೊಬ್ಬನಿಗೂ ನಾಲ್ಕು ಮುಖಗಳು ಇರುತ್ತವೆ. ವೈಯಕ್ತಿಕ ಮುಖ, ಔದ್ಯೋಗಿಕ ಮುಖ, ಸಾಮಾಜಿಕ ಮತ್ತು ಕೌಟುಂಬಿಕ ಮುಖ. ಜಯಪ್ರಕಾಶ ಅವರ ಈ ಪುಸ್ತಕದಲ್ಲಿ ಅದೆಲ್ಲವೂ ಕಾಣಸಿಗುತ್ತದೆ. ಡಾ| ಅಬ್ದುಲ್ ಕಲಾಮ್ ಜೊತೆಗಿನ ಅವರ ಬಾಂಧವ್ಯ ಬಹಳ ವಿಶಿಷ್ಟವಾದದ್ದು ಎಂದರು.

ಲೇಖಕ ಜಯಪ್ರಕಾಶ್ ರಾವ್ ಕೆ., ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಕುಮಾರ ಬೆಕ್ಕೇರಿ, ಕಲಾವಿದೆ ಪಂಚವೀಣಾ ಕಲಾವಿದೆ ಪವನಾ ಆಚಾರ್, ಸಂಸ್ಕೃತಿ ವಿಶ್ವ ಪ್ರತಿಷ್ಠಾನ ಅಧ್ಯಕ್ಷ, ಖ್ಯಾತ ಜಾದೂಗಾರ ಪ್ರೊ. ಶಂಕರ್ ಇದ್ದರು. ಪ್ರತಿಷ್ಠಾನದ ಗೌರವಾಧ್ಯಕ್ಷ, ಉದ್ಯಮಿ ಯು. ವಿಶ್ವನಾಥ ಶೆಣೈ ಅಧ್ಯಕ್ಷತೆ ವಹಿಸಿದ್ದರು.
ಪ್ರತಿಷ್ಠಾನ ಉಪಾಧ್ಯಕ್ಷ ನಾಗರಾಜ್ ಹೆಬ್ಬಾರ್ ಸ್ವಾಗತಿಸಿದರು. ಕಲಾವಿದ ರಾಜೇಶ್ ಭಟ್ ಪಣಿಯಾಡಿ ನಿರೂಪಿಸಿದರು. ಪ್ರಧಾನ ಕಾರ್ಯದರ್ಶಿ ಗಿರೀಶ್ ತಂತ್ರಿ ವಂದಿಸಿದರು. ರವಿರಾಜ್ ಎಚ್. ಪಿ. ಸಹಕರಿಸಿದರು.

ಬಳಿಕ ಪವನಾ ಬಿ. ಆಚಾರ್ ಮಣಿಪಾಲ ಅವರಿಂದ ವೀಣಾ ವಾದನ ಕಛೇರಿ ವೀಣೆ- ಬೆಳಗು- ಬೆಡಗು  ನಡೆಯಿತು

ನಿಮಗೆ ಈ ಸುದ್ದಿ ಇಷ್ಟವಾಯ್ತಾ?
ಹಾಗಾದರೆ ಇತರರಿಗೂ SHARE ಮಾಡಿ ಓದಿಸಿ...

ಕಾಮೆಂಟ್ ಮಾಡಿ

error: Content is protected !!