ಉಡುಪಿ: ಪ್ರೇಮಿಗಳ ದಿನ (ವ್ಯಾಲೆಂಟೈನ್ ಡೇ) ನಿಮಿತ್ತ ನಡೆಯುವ ಅಯೋಗ್ಯ ಕೃತ್ಯ ತಡೆಗಟ್ಟಿ ಪ್ರಾಚೀನ ಭಾರತೀಯ ಸಂಸ್ಕೃತಿಯ ರಕ್ಷಣೆ ಮಾಡುವಂತೆ ಆಗ್ರಹಿಸಿ ಹಿಂದೂ ಜನ ಜಾಗೃತಿ ಸಮಿತಿ ಹಾಗೂ ಇತರ ಹಿಂದುತ್ವ ನಿಷ್ಠ ಧರ್ಮಪ್ರೇಮಿಗಳ ವತಿಯಿಂದ ಮಂಗಳವಾರ ಜಿಲ್ಲಾಧಿಕಾರಿ ಸಹಿತ ವಿವಿಧ ಇಲಾಖೆ ಮುಖ್ಯಸ್ಥರಿಗೆ ಮನವಿ ನೀಡಲಾಯಿತು.
ಹೆಚ್ಚುವರಿ ಜಿಲ್ಲಾಧಿಕಾರಿ ಬಿ. ಸದಾಶಿವ ಪ್ರಭು ಅವರಿಗೆ ಮನವಿ ನೀಡಲಾಯಿತು
ಅಂತೆಯೇ ಎ.ಎಸ್.ಪಿ. ಕುಮಾರಚಂದ್ರ, ಸಾರ್ವಜನಿಕ ಶಿಕ್ಷಣ ಇಲಾಖೆ ಸಹಾಯಕ ನಿರ್ದೇಶಕ ಎನ್. ಎಚ್. ನಾಗೂರ ಹಾಗೂ ಉಡುಪಿ ಕ್ಷೇತ್ರ ಶಿಕ್ಷಣಾಧಿಕಾರಿ ಮಂಜುಳಾ ಕೆ. ಅವರಿಗೂ ಮನವಿ ನೀಡಲಾಯಿತು