Thursday, July 7, 2022
Home ಸಮಾಚಾರ ಜಿಲ್ಲಾ ಸುದ್ದಿ ಮಹಿಳೆಯರಿಗೆ ಘನತೆ ತಂದಿತ್ತ ಸಂವಿಧಾನ

ಮಹಿಳೆಯರಿಗೆ ಘನತೆ ತಂದಿತ್ತ ಸಂವಿಧಾನ

ಉಡುಪಿ: ಸಂವಿಧಾ ಎಲ್ಲಾ ಜಾತಿ, ಧರ್ಮದವರಿಗೆ ಸಮಾನವಾಗಿ ಸಾಮಾಜಿಕ, ಆರ್ಥಿಕ ಮತ್ತು ರಾಜಕೀಯ ಸೌಲಭ್ಯ ನೀಡಿದೆ. ಎಲ್ಲಕ್ಕಿಂತ ಹೆಚ್ಚಾಗಿ ದೇಶದ ಮಹಿಳೆಯರಿಗೆ ಘನತೆ ತಂದುಕೊಟ್ಟಿದ್ದು ಸಂವಿಧಾನ ಎಂದು ದಲಿತ ಚಿಂತಕ ಹಾಗೂ ಜನಪರ ಹೋರಾಟಗಾರ ಜಯನ್ ಮಲ್ಪೆ ಪ್ರತಿಪಾದಿಸಿದರು.
ಮಲ್ಪೆ ಸರಸ್ವತಿ ಬಯಲು ರಂಗಮಂದಿರದಲ್ಲಿ ಅಂಬೇಡ್ಕರ್ ಯುವಸೇನೆ ಆಯೋಜಿಸಿದ್ದ ಭಾರತದ ಸಂವಿಧಾನ ಅರ್ಪಣಾ ದಿನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಸಂವಿಧಾನ ಎಂದರೆ ಮೀಸಲಾತಿ ಎಂದು ಬಹುತೇಕ ಮಂದಿ ತಪ್ಪು ತಿಳಿದಿದ್ದಾರೆ. ಅದು ಸರಿಯಲ್ಲ ಎಂದರು.
ಅಂಬೇಡ್ಕರ್ ಯುವಸೇನೆ ಅಧ್ಯಕ್ಷ ಹರೀಶ್ ಸಾಲ್ಯಾನ್ ಅಧ್ಯಕ್ಷತೆ ವಹಿಸಿದ್ದರು.
ಮುಖ್ಯ ಅತಿಥಿ ಹಿರಿಯ ದಲಿತ ಮುಖಂಡ ಸುಂದರ ಕಪ್ಪೆಟ್ಟು, ನಮ್ಮ ಸಂವಿಧಾನ ಉಳಿದರೆ ದೇಶದ ಸಮಗ್ರತೆ, ಸಂಸ್ಕೃತಿ ಮತ್ತು ಜನರ ಬದುಕು ಉಳಿಯುತ್ತದೆ. ನಮ್ಮ ಸಂವಿಧಾನ ಎಲ್ಲಿಯ ವರೆಗೆ ಸುರಕ್ಷಿತವಾಗಿರುತ್ತದೆಯೋ ಅಲ್ಲಿಯ ವರೆಗೆ ನಾವೆಲ್ಲರೂ ಸುರಕ್ಷಿತರಾಗಿರಲು ಸಾಧ್ಯ. ಈ ನಿಟ್ಟಿನಲ್ಲಿ ಸಂವಿಧಾನ ರಕ್ಷಣೆ ನಮ್ಮ ಹೊಣೆ ಎಂದರು.
ಅಂಬೇಡ್ಕರ್ ಯುಸೇನೆ ಉಪಾಧ್ಯಕ್ಷ ಮಂಜುನಾಥ ಕಪ್ಪೆಟ್ಟು, ಸುಮಿತ್ ಮಲ್ಪೆ, ಕೃಷ್ಣ ಶ್ರೀಯಾನ್, ಸಂತೋಷ್ ಕಪ್ಪೆಟ್ಟು ಮೊದಲಾದವರಿದ್ದರು.
ಕಾರ್ಯಕ್ರಮದಲ್ಲಿ ದಲಿತ ಮುಖಂಡರಾದ ಗುಣವಂತ ತೊಟ್ಟಂ, ಮಂಜುನಾಥ ಅಮ್ಮುಂಜೆ, ಪ್ರಶಾಂತ್ ಕಾಂಚನ್ ನೆರ್ಗಿ, ಹರೀಶ್ ಅಮೀನ್, ಕೃಷ್ಣ ಬಂಗೇರ, ರಾಮೋಜಿ ಅಮೀನ್ ಕೊಳ, ಲಕ್ಷ್ಮಣ ನೆರ್ಗಿ, ನಿಹಾಲ್, ಯಶೋದ ನೆರ್ಗಿ, ಶರೀನ, ಸುಮ, ವಿನೋದ, ಪೂರ್ಣಿಮಾ, ಪ್ರಶಾಂತ್ ಬಿ. ಎನ್., ಅರುಣ್ ಸಾಲ್ಯಾನ್, ನಿತೇಶ್, ವಸಂತಿ ನೆರ್ಗಿ ಮೊದಲಾದವರಿದ್ದರು.
ಯುವಸೇನೆಯ ಪ್ರಸಾದ್ ನೆರ್ಗಿ ಸ್ವಾಗತಿಸಿ, ಸುಶೀಲ್ ಕುಮಾರ್ ಕೊಡವೂರು ವಂದಿಸಿದರು. ಭಗವಾನ್ ನೆರ್ಗಿ ನಿರೂಪಿಸಿದರು

ನಿಮಗೆ ಈ ಸುದ್ದಿ ಇಷ್ಟವಾಯ್ತಾ?
ಹಾಗಾದರೆ ಇತರರಿಗೂ SHARE ಮಾಡಿ ಓದಿಸಿ...

ಕಾಮೆಂಟ್ ಮಾಡಿ

error: Content is protected !!