Saturday, July 2, 2022
Home ಸಮಾಚಾರ ರಾಜ್ಯ ವಾರ್ತೆ ಸನಾತನ ಪ್ರಭಾತ ವರ್ಧಂತ್ಯುತ್ಸವ

ಸನಾತನ ಪ್ರಭಾತ ವರ್ಧಂತ್ಯುತ್ಸವ

ಉಡುಪಿ: ಕಳೆದ 22 ವರ್ಷದಿಂದ ಹಿಂದೂ ರಾಷ್ಟ್ರ ಸ್ಥಾಪನೆ ಉದ್ದೇಶದಿಂದ ನಿರಂತರವಾಗಿ ಧರ್ಮಜಾಗೃತಿ ಮತ್ತು ಹಿಂದೂಗಳ ಮೇಲೆ ಆಗುತ್ತಿರುವ ಅನ್ಯಾಯದ ವಿರುದ್ಧ ಬಡಿದೆಬ್ಬಿಸುವ ಕಾರ್ಯ ಮಾಡುತ್ತಿರುವ ಸತಾತನ ಪ್ರಭಾತ ಪತ್ರಿಕೆಯ 22ನೇ ವರ್ಷದ ವರ್ಧಂತ್ಯುತ್ಸವ ಈ ತಿಂಗಳ 13ರಂದು ಸಂಜೆ 6ರಿಂದ ಆನ್ ಲೈನ್ ಮೂಲಕ ನಡೆಸಲಾಗುತ್ತಿದೆ.

ಮೂಡುಬಿದಿರೆ ಶ್ರೀ ಮುಕ್ತಾನಂದ ಸ್ವಾಮೀಜಿ, ಸನಾತನ ಸಂಸ್ಥೆ ಧರ್ಮಪ್ರಚಾರಕ ರಮಾನಂದ ಗೌಡ, ಶ್ರೀರಾಮ ಸೇನೆ ಸಂಸ್ಥಾಪಕ ಪ್ರಮೋದ್ ಮುತಾಲಿಕ್, ಯುವ ಬ್ರಿಗೇಡ್ ನ ಚಕ್ರವರ್ತಿ ಸೂಲಿಬೆಲೆ, ಹಿಂದೂ ಜನಜಾಗೃತಿ

ರಾಜ್ಯ ಸಮನ್ವಯಕಾರ ಗುರುಪ್ರಸಾದ ಗೌಡ ಮೊದಲಾದವರು ಭಾಗವಹಿಸುವರು.
ಸಂಸ್ಥೆಯ ಜಾಲತಾಣದಲ್ಲಿ ಕಾರ್ಯಕ್ರಮ ವೀಕ್ಷಿಸಬಹುದು ಎಂದು ಸತಾತನ ಸಂಸ್ಥೆ ವಕ್ತಾರ ವಿನೋದ ಕಾಮತ್ ತಿಳಿಸಿದ್ದಾರೆ

ನಿಮಗೆ ಈ ಸುದ್ದಿ ಇಷ್ಟವಾಯ್ತಾ?
ಹಾಗಾದರೆ ಇತರರಿಗೂ SHARE ಮಾಡಿ ಓದಿಸಿ...

ಕಾಮೆಂಟ್ ಮಾಡಿ

error: Content is protected !!