ಉಡುಪಿ: ಪೇಜಾವರ ಮಠಾಧೀಶ ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಪಾದರ ಸನ್ಯಾಸ ಸ್ವೀಕಾರದ 33ನೇ ವರ್ಥಂತಿ ಉತ್ಸವ ಮಂಗಳವಾರ ಇಲ್ಲಿನ ಪೇಜಾವರ ಮಠದಲ್ಲಿ ನಡೆಯಿತು.
ಶ್ರೀಗಳಿಗೆ ಅವರ ಶಿಷ್ಯರು ಮತ್ತು ಅಭಿಮಾನಿಗಳು ವಿಶೇಷ ಪುಷ್ಪಾಭಿಷೇಕ ನೆರವೇರಿಸಿ, ಗುರುವಂದನೆ ಸಲ್ಲಿಸಿದರು.
ಕಾರ್ಯಕ್ರಮದಲ್ಲಿ ಮಠದ ದಿವಾನ ಎಂ. ರಘುರಾಮಾಚಾರ್ಯ, ವಿದ್ವಾನ್ ವಿಶ್ವೇಶ ಭಟ್, ರಾಮಚಂದ್ರ ಭಟ್. ಸಿಇಒ ಸುಬ್ರಹ್ಮಣ್ಯ ಭಟ್, ವ್ಯವಸ್ಥಾಪಕ ಇಂದುಶೇಖರ ಹೆಗ್ಡೆ, ಶ್ರೀಗಳ ಆಪ್ತ ಕಾರ್ಯದರ್ಶಿಗಳಾದ ವಿಷ್ಣುಮೂರ್ತಿ ಆಚಾರ್ಯ ಮತ್ತು ಕೃಷ್ಣ ಭಟ್, ಎಸ್. ವಿ. ಭಟ್ ಮೊದಲಾದವರು ಗೌರವ ಸಮರ್ಪಿಸಿದರು.
ವಾಸುದೇವ ಭಟ್ ಪೆರಂಪಳ್ಳಿ ಕಾರ್ಯಕ್ರಮ ಸಂಯೋಜಿಸಿ, ವಂದಿಸಿದರು