Monday, July 4, 2022
Home ಸಮಾಚಾರ ಜಿಲ್ಲಾ ಸುದ್ದಿ ಪ್ರೀತಿ ಸೌಹಾರ್ದತೆಯ ಜೀವನ ನಮ್ಮದಾಗಲಿ

ಪ್ರೀತಿ ಸೌಹಾರ್ದತೆಯ ಜೀವನ ನಮ್ಮದಾಗಲಿ

ಉಡುಪಿ: ಪರಸ್ಪರ ಪ್ರೀತಿ ವಿಶ್ವಾಸ ಸೌಹಾರ್ದತೆಯೊಂದಿಗೆ ಸಹಬಾಳ್ವೆ ನಡೆಸುವ ಮೂಲಕ ಯಾರನ್ನೂ ಪ್ರತ್ಯೇಕಿಸದೆ, ಎಲ್ಲರೂ ನಮ್ಮವರು ಎನ್ನುವ ಭಾವನೆಯಲ್ಲಿ ಜೀವನ ನಡೆಸಬೇಕು ಎಂದು ಉಡುಪಿ ಕ್ರೈಸ್ತ ಧರ್ಮಾಧ್ಯಕ್ಷ ಡಾ| ಜೆರಾಲ್ಡ್ ಐಸಾಕ್ ಲೋಬೊ ಕರೆ ನೀಡಿದ್ದಾರೆ.

ಕ್ರಿಸ್ ಮಸ್ ಮತ್ತು ಹೊಸ ವರ್ಷಾಚರಣೆ ಸಂದರ್ಭದಲ್ಲಿ ಸಂದೇಶ ನೀಡಿರುವ ಅವರು, ಇಡೀ ವಿಶ್ವವೇ ಆರೋಗ್ಯ, ನೆಮ್ಮದಿ ಹಾಗೂ ಶಾಂತಿ ಸಮಾಧಾನಗಳಿಗಾಗಿ ಹಾತೊರೆಯುತ್ತಿರುವ ಈ ಕಾಲಘಟ್ಟದಲ್ಲಿ ಏಸು ಕ್ರಿಸ್ತರ ಜಯಂತಿ ಭರವಸೆಯ ಕಿರಣದಂತೆ ಹೊಮ್ಮಿ, ಮುಂಬರುವ ಹೊಸ ಬದುಕಿಗೆ ಪೀಠಿಕೆ ಹಾಕುವಂತಿದೆ.

ಪರಸ್ಪರ ಉದಾರತೆ ವೃದ್ಧಿಸಿ ಎಲ್ಲೆಡೆ ಶಾಂತಿ ಮೊಳಗಬೇಕು. ಇದೇ ನಾವು ಪರರಿಗೆ ನೀಡುವ ಅತ್ಯುನ್ನತ ಕ್ರಿಸ್ ಮಸ್ ಉಡುಗೊರೆ ಎಂದವರು ವಿಶ್ಲೇಷಿಸಿದ್ದಾರೆ.

ಪೋಪ್ ಸಂದೇಶದಂತೆ ಪರಸ್ಪರ ಸೋದರ ಭಾವದಿಂದ ಬಾಳಬೇಕು. ಧರ್ಮ, ಜಾತಿ, ವರ್ಗ, ಪ್ರಾಂತ್ಯ, ಸಂಸ್ಕೃತಿ, ರೀತಿ ರಿವಾಜುಗಳ ಸೀಮೆ ದಾಟಿ ಮಾನವೀಯತೆ ಎಂಬ ವಿಶ್ವ ಧರ್ಮದಡಿ ಒಂದಾಗಬೇಕು ಎಂದು ಫಾ| ಡಾ| ಐಸಾಕ್ ಲೋಬೊ ಹಾರೈಸಿದ್ದಾರೆ

ನಿಮಗೆ ಈ ಸುದ್ದಿ ಇಷ್ಟವಾಯ್ತಾ?
ಹಾಗಾದರೆ ಇತರರಿಗೂ SHARE ಮಾಡಿ ಓದಿಸಿ...

ಕಾಮೆಂಟ್ ಮಾಡಿ

error: Content is protected !!